Advertisement

ಮೋದಿ ಜತೆ ಟಿವಿ ಚರ್ಚೆಗೆ ಸಿದ್ಧ: ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌

08:38 PM Feb 22, 2022 | Team Udayavani |

ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಎಲ್ಲ ಮನಸ್ತಾಪಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಟಿವಿ ಚರ್ಚೆಗೆ ಸಿದ್ಧವಿರುವುದಾಗಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಘೋಷಿಸಿದ್ದಾರೆ.

Advertisement

75 ವರ್ಷಗಳ ಹಿಂದೆ ದೇಶ ಸ್ವಾತಂತ್ರ್ಯ ಪಡೆದಾಗಿನಿಂದಲೂ ಎರಡೂ ದೇಶಗಳ ಸಂಬಂಧ ಚೆನ್ನಾಗಿಲ್ಲ. ಹೀಗಾಗಿ ನೇರವಾಗಿ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ನಾನು ಇಚ್ಛಿಸುತ್ತೇನೆ. ಆ ಮೂಲಕವಾದರೂ ಉಭಯ ದೇಶಗಳ ನಡುವೆ ಇರುವ ವೈಮನಸ್ಸು ಶಮನಗೊಳ್ಳಲಿ ಎನ್ನುವುದು ನನ್ನ ಉದ್ದೇಶ ಎಂದಿದ್ದಾರೆ ಇಮ್ರಾನ್‌ ಖಾನ್‌.

ಮಂಗಳವಾರ “ರಷ್ಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಮಾತುಕತೆ ಮೂಲಕ ಸಮಸ್ಯೆಗಳು ಬಗೆಹರಿದರೆ ಭಾರತೀಯ ಉಪಖಂಡದಲ್ಲಿರುವ ಕೋಟ್ಯಂತರ ಮಂದಿಗೆ ಅನುಕೂಲವಾಗಲಿದೆ ಎಂದೂ ಹೇಳಿದ್ದಾರೆ. ಆದರೆ, ಇಮ್ರಾನ್‌ ಖಾನ್‌ ಅವರ ಈ ಮಾತುಕತೆ ಆಫ‌ರ್‌ಗೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:ಅಪ್ಪನ ಮೇಲಿನ ಸಿಟ್ಟಿನಿಂದ ಮರವೇರಿದ ಯುವಕ : ಇಳಿಯಲಾಗದೆ ರಕ್ಷಣೆಗಾಗಿ ಅಪ್ಪನನ್ನೇ ಕರೆದ

ಆದರೆ, “ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೇ ನಡೆಯಲು ಸಾಧ್ಯವಿಲ್ಲ’ ಎಂದು ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಭಾರತ ಸರ್ಕಾರವು ಸ್ಪಷ್ಟಪಡಿಸಿತ್ತು. ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿರುವ ಉಗ್ರರೂ ಸೇರಿದಂತೆ ಎಲ್ಲ ರೀತಿಯ ಉಗ್ರವಾದಿಗಳನ್ನು ಮೊದಲು ಮಟ್ಟ ಹಾಕುವಂತೆಯೂ ಪಾಕ್‌ಗೆ ತಿಳಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next