Advertisement

Salman Khan ಹತ್ಯೆಗೆ ಪಾಕ್‌ನ ಗನ್‌, ಪರಾರಿ ಯೋಜನೆ?

01:07 AM Jun 02, 2024 | Team Udayavani |

 

Advertisement

ಮುಂಬಯಿ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಬಾಂದ್ರಾ ನಿವಾಸದೆ ದುರು ಎ.14ರಂದು ನಡೆದಿದ್ದ ಗುಂಡಿನ ದಾಳಿಯ ಹಿಂದಿನ ರಹಸ್ಯಗಳು ಈಗ ಬಹಿರಂಗವಾಗಿವೆ. ಪಾಕಿಸ್ಥಾನ ದಿಂದ ತರಿಸಿದ್ದ ಎಕೆ-47, ಎಂ-16 ರೈಫ‌ಲ್‌ಗ‌ಳು, ಅಪ್ರಾಪ್ತ ವಯಸ್ಕ ಶಾರ್ಪ್‌ ಶೂಟರ್‌ಗಳು, ಕೃತ್ಯ ಮುಗಿಸಿದ ಬಳಿಕ ಶ್ರೀಲಂಕಾಕ್ಕೆ ಪರಾರಿಯಾಗುವ ಯೋಜನೆ ಮಾಡಲಾಗಿತ್ತು. ಸದ್ಯ ತಿಹಾರ್‌ ಜೈಲಿನಲ್ಲಿರುವ ಭೂಗತ ಪಾತಕಿ ಲಾರೆನ್ಸ್‌ ಬಿಷ್ಣೋಯಿ ತಂಡ ಸಂಪೂರ್ಣ ಯೋಜನೆ ಮಾಡಿತ್ತು ಎಂದು ಮುಂಬಯಿ ಪೊಲೀಸ್‌ ಮೂಲಗಳು ಹೇಳಿವೆ.

ಮುಂಬಯಿಯ ಪನ್ವೇಲ್‌ನಲ್ಲಿ ಸಲ್ಮಾನ್‌ ಖಾನ್‌ ಕಾರಿನ ಮೇಲೆ ದಾಳಿ ಮಾಡುವ ಯೋಜನೆಯಿತ್ತು. ಇನ್ನೊಂದು ಯೋಜನೆಯಲ್ಲಿ ಸಲ್ಮಾನ್‌ ಫಾರ್ಮ್ ಹೌಸ್‌ ಮೇಲೆ ದಾಳಿ ಮಾಡುವ ಉದ್ದೇಶವಿತ್ತು ಎನ್ನಲಾಗಿದೆ.

60-70 ಮಂದಿಯ ತಂಡ: ಸಲ್ಮಾನ್‌ ಹತ್ಯೆಗೆ ಜೈಲಿನಲ್ಲಿದ್ದ ಲಾರೆನ್ಸ್‌ ಗ್ಯಾಂಗ್‌ನ 60-70 ಜನರ ತಂಡ ಯೋಜನೆ ರೂಪಿಸಿತ್ತು. ಪ್ರಕರಣ ಸಂಬಂಧ 6 ಮಂದಿ ಬಂಧಿತರಾಗಿದ್ದಾರೆ. ಅಜಯ್‌ ಕಶ್ಯಪ್‌, ಗೌರವ್‌ ಭಾಟಿಯ, ವಸೀಮ್‌ ಚಿಕ್ನಾ, ರಿಜ್ವಾನ್‌ ಖಾನ್‌ ಇಡೀ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇವರಿಗೆ ಬಂದೂಕು ಪೂರೈಸಲು ಲಾರೆನ್ಸ್‌ ಸಂಬಂಧಿ ಅನ್ಮೋಲ್‌ ಬಿಷ್ಣೋಯಿ, ಗೋಲ್ಡಿ ಬ್ರಾರ್‌ ನೆರವಾಗಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next