Advertisement

ಉಗ್ರತ್ವಕ್ಕೆ ಪಾಕಿಸ್ಥಾನದ  ಪ್ರೋತ್ಸಾಹ

09:47 AM Jan 12, 2019 | Team Udayavani |

ಹೊಸದಿಲ್ಲಿ: “ಭಾರತದೊಂದಿಗೆ ಮಾತುಕತೆಯ ಪ್ರಸ್ತಾಪವಿಡುತ್ತಿರುವ ಪಾಕಿಸ್ಥಾನವು ಈ ವಿಚಾರದಲ್ಲಿ ಗಂಭೀರವಾಗಿಲ್ಲ. ಅಲ್ಲದೆ, ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ಮುಂದುವರಿಸಿರುವ ಆ ದೇಶವು, ಭಯೋತ್ಪಾದನೆಯನ್ನು  ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ’ ಎಂದು ಭಾರತ ಆರೋಪಿಸಿದೆ. ಶಾಂತಿ ಮಾತುಕತೆಯ ಪ್ರಸ್ತಾಪಕ್ಕೆ ಭಾರತವು ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂಬ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಆರೋಪಕ್ಕೆ ಭಾರತದ ವಿದೇಶಾಂಗ ಇಲಾಖೆಯು ಇಂತಹ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಮಾತುಕತೆಗೆ ಸಿದ್ಧ ಎಂದು ಪಾಕ್‌ ಹೇಳುತ್ತಿದ್ದರೂ, ಆ ದೇಶದ ಸಚಿವರು ಉಗ್ರರೊಂದಿಗೆ ವೇದಿಕೆ ಹಂಚಿಕೊಳ್ಳುವುದನ್ನು ನಿಲ್ಲಿಸುತ್ತಿಲ್ಲವೇಕೆ ಎಂದು ವಿದೇಶಾಂಗ ಇಲಾಖೆ ವಕ್ತಾರ  ಪ್ರಶ್ನಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next