ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆ ವೇಳೆ ಅಕ್ರಮ ನಡೆದಿರುವುದು ನಿಜ ಎಂದು ಒಪ್ಪಿಕೊಂಡಿರುವ ಚುನಾವಣಾಧಿಕಾರಿಯೊಬ್ಬರು, ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚುನಾವಣಾ ಅಧಿಕಾರಿಗಳು ತಮ್ಮ ಪಕ್ಷದ ವಿರುದ್ಧ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ದೇಶದಾದ್ಯಂತ ಪ್ರತಿಭಟನೆ ಆರಂಭಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ರಾಜೀನಾಮೆ ನೀಡಿರುವ ರಾವಲ್ಪಿಂಡಿ ಚುನಾವಣಾಧಿಕಾರಿ ಲಿಯಾಕತ್ ಅಲಿ ಚತ್ತಾ ಅವರು, ಅಕ್ರಮದಲ್ಲಿ ಮುಖ್ಯ ಚುನಾವಣಾಆಯುಕ್ತ ಮತ್ತು ಮುಖ್ಯ ನ್ಯಾಯಮೂರ್ತಿಗಳ ಕೈವಾಡವೂ ಇದೆ ಎಂದು ಆರೋಪಿಸಿದ್ದಾರೆ.
ವಿಪಕ್ಷದಲ್ಲಿರಲು ಪಿಟಿಐ ನಿರ್ಧಾರ:
ಇದೇ ವೇಳೆ, ಸರ್ಕಾರ ರಚಿಸಲು ವಿಫಲವಾಗಿರುವ ಪಿಟಿಐ, ಪ್ರತಿಪಕ್ಷದ ಸ್ಥಾನದಲ್ಲಿರಲು ನಿರ್ಧರಿಸಿದೆ. ಇನ್ನೊಂದೆಡೆ, ಸರ್ಕಾರ ರಚಿಸಲು ಬೇಕಾದ ಸಂಖ್ಯಾಬಲ ಹೊಂದಿರುವುದಾಗಿ ನವಾಜ್ ಷರೀಫ್ ಅವರ ಪಿಎಂಎಲ್‌ಎನ್ ಪಕ್ಷ ಹೇಳಿಕೊಂಡಿದೆ.