ಹೊಸದಿಲ್ಲಿ: ಸಿರಿಯಾದಲ್ಲಿ ಐಸಿಸ್ ಉಗ್ರರ ಚಳವಳಿಯಲ್ಲಿ ಪಾಕಿಸ್ಥಾನದ ಭಯೋತ್ಪಾದಕರ ಕೈವಾಡವೂ ಇದೆಯೆಂಬ ದಟ್ಟ ವಾಸನೆ ಇದೀಗ ಅಮೆರಿಕಕ್ಕೆ ಬಡಿದಿದೆ. ಈ ಬಗ್ಗೆ ಅಮೆರಿಕ ತನಿಖೆ ಆರಂಭಿಸಿರುವುದು, ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ನುಂಗಲಾರದ ತುತ್ತಾಗಿದೆ.
ಕುದ್ì ಸಿರಿಯನ್ ಡೆಮಾಕ್ರಟಿಕ್ ಪಡೆ ತನ್ನ ವಶದಲ್ಲಿರುವ 29 ಪಾಕಿಸ್ತಾನಿ ಉಗ್ರರ ಹೆಸರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ಕುರಿ ತಂತೆ ತನಿಖೆ ನಡೆ ಸುವ ನಿರ್ಧಾರ ಕೈಗೊಂಡಿದೆ. 29ರಲ್ಲಿ 9 ಮಂದಿ ಮಹಿಳೆಯರು ಸೇರಿದ್ದಾರೆ. ಅಲ್ಲದೆ, ಟರ್ಕಿ ಮತ್ತು ಸೂಡಾನ್‌ನಂಥ ದೇಶಗಳ ಪೌರತ್ವ ಪಡೆದ ನಾಲ್ವರು ಪಾಕ್ ಉಗ್ರರೂ ಈ ಪಟ್ಟಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಪಾಕ್‌ಗೆ ಭಯ: ಅಮೆರಿಕ ಸೇನೆಯ ತನಿಖೆ ವಿಚಾರ ಕೇಳಿ ಪಾಕ್ ವಿಲವಿಲ ಎನ್ನುತ್ತಿದೆ. ಈ 29 ಉಗ್ರರ ಜನ್ಮಜಾಲಾಡಿದರೆ, ತನ್ನ ನೆಲಕ್ಕೇ ಕುತ್ತು ಎನ್ನುವ ಭಯ ಪಾಕಿಸ್ಥಾನವನ್ನು ಆವರಿಸಿದೆ. ಐಸಿಸ್‌ನ ಸೋದರ ಸಂಘಟನೆ ಖೊರೊಸಾನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ಸ್‌ನಲ್ಲಿ ಪಾಕಿಸ್ಥಾನ ಸಹಸ್ರಾರು ಉಗ್ರರನ್ನು ತರಬೇತಿಗೊಳಿಸುತ್ತಿದೆ. ಖೊರೊಸಾನ್ ಪಾತಕಿಗಳು ಅಫ್ಘಾನಿಸ್ತಾನದಲ್ಲಿ ಅಳಿವಿನಂಚಿನಲ್ಲಿರುವ ಅಲ್ಪಸಂಖ್ಯಾತ ಹಿಂದೂ, ಸಿಖV ರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿತ್ತು.
ಇಮ್ರಾನ್‌ಗೆ ಚಿಂತೆ: ಇಸ್ಲಾಮಿಕ್ ಸ್ಟೇಟ್- ಖೊರೊಸಾನ್ ಪ್ರಾಂತ್ಯದ (ಐಎಸ್‌ಕೆಪಿ) ಮುಖ್ಯಸ್ಥ- ಪಾಕ್ ಪ್ರಜೆ ಅಸ್ಲಾಮ್ ಫಾರೂಕಿ, ಗುರುದ್ವಾರದ ಮೇಲೆ ಬಾಂಬ್ ದಾಳಿ ನಡೆಸಿರುವ ಆರೋಪದಲ್ಲಿ ಅಫ^ನ್ ಸೇನೆಯ ವಶದಲ್ಲಿದ್ದಾರೆ. ಈತ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆಗೆ ನಿಕಟ ಸಂಬಂಧ ಹೊಂದಿದ್ದಾನೆ. ಫಾರೂಕಿ ಯನ್ನು ಹಸ್ತಾಂತರಿಸಬೇಕೆನ್ನುವ ಪಾಕಿಸ್ಥಾನದ ಬೇಡಿಕೆಗೂ ಅಫ^ನ್ ಪುರಸ್ಕರಿಸದೆ ಇರವುದು ಇಮ್ರಾನ್ ಆಡಳಿತವನ್ನು ತೀವ್ರ ಚಿಂತೆಗೀಡು ಮಾಡಿದೆ.
ಪಾಕ್‌ನ “ಬಿಳಿಪಟ್ಟಿ’ ಕನಸು ಛಿದ್ರ
ಜಾಗತಿಕ ಕಣ್ಗಾವಲು ಸಂಸ್ಥೆಯ (ಎಫ್ಎಟಿಎಫ್) “ಬೂದುಪಟ್ಟಿ’ಯಿಂದ ಹೊರಬ ರಲು ಪಾಕ್ ಇನ್ನಿಲ್ಲದಂತೆ ಯತ್ನಿಸುತ್ತಿದೆ. ಈ ಸಂಬಂಧ ಇಮ್ರಾನ್ ಸರಕಾರ ಮಂಡಿಸಿದ್ದ ಎರಡು ಮಸೂದೆಗೆ ಸಂಸತ್ತಿನ ಮೇಲ್ಮನೆಯಲ್ಲಿ ಅನುಮೋದನೆ ಸಿಗದೆ ಸೋಲು ಕಂಡಿದೆ. ಆ್ಯಂಟಿ ಮನಿ ಲಾಂಡರಿಂಗ್ (2ನೇ ತಿದ್ದುಪಡಿ), ಇಸ್ಲಾಮಾಬಾದ್ ಕ್ಯಾಪಿಟಲ್ ಟೆರಿಟರಿ ಮಸೂ ದೆಗಳು ಮಂಗಳವಾರ ಧ್ವನಿಮತದ ಮೂಲಕ ಹಿನ್ನಡೆ ಕಂಡಿವೆ. ಇವೆರಡೂ ಮಸೂದೆಗಳ ಮೂಲಕ ಇಮ್ರಾನ್ ಪಾಕಿಸ್ಥಾನವನ್ನು ಬೂದು ಪಟ್ಟಿಯಿಂದ, ಬಿಳಿಪಟ್ಟಿಗೆ ವರ್ಗಾಯಿಸಲು ಯತ್ನಿ ಸುತ್ತಿದ್ದಾರೆ ಎನ್ನಲಾಗಿದೆ. ಭಯೋತ್ಪಾ ದಕರಿಗೆ ಆರ್ಥಿಕ ನೆರವು ನೀಡುತ್ತಿರುವ ಹಿನ್ನೆಲೆಯಲ್ಲಿ ಎಫ್ಎಟಿಎಫ್, ಪಾಕಿಸ್ಥಾನವನ್ನು ಬೂದುಪಟ್ಟಿಗೆ ಸೇರಿಸಿತ್ತು.