Advertisement

ಪಾಕ್‌ ಸ್ಕ್ವಾಷ್‌ ದಿಗ್ಗಜ ಕೋವಿಡ್‌ 19ಕ್ಕೆ ಬಲಿ

12:56 AM Mar 31, 2020 | Sriram |

ಕರಾಚಿ: ಪಾಕಿಸ್ಥಾನದ ದಿಗ್ಗಜ ಸ್ಕ್ವಾಷ್‌ ಆಟಗಾರ ಅಜಂ ಖಾನ್‌ ಕೋವಿಡ್‌ 19ಕ್ಕೆ ಬಲಿಯಾಗಿದ್ದಾರೆ. 95 ವರ್ಷದ ಅಜಂ ಖಾನ್‌ ಲಂಡನ್‌ನಲ್ಲಿ ನೆಲೆಸಿದ್ದರು. ಕಳೆದ ವಾರ ಕೋವಿಡ್‌ 19  ಸೋಂಕಿತರಾಗಿ ಲಂಡನ್‌ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು, ಇದೀಗ ಅದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 1959-1961 ರ ಅವಧಿಯಲ್ಲಿ ಅಜಂ ಖಾನ್‌ ಬ್ರಿಟಿಷ್‌ ಓಪನ್‌ ಪ್ರಶಸ್ತಿ ಗೆದ್ದಿದ್ದರು. 1961ರ ಅನಂತರ ಗಾಯದ ಸಮಸ್ಯೆ ಕಾಡಿತ್ತು, ಜತೆಗೆ ಪುತ್ರನ ಮರಣ ಕೂಡ ಅಜಂ ಖಾನ್‌ ಅವರನ್ನು ಬಹುವಾಗಿ ಕಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next