ಜಮ್ಮು: ಸಂಶಯಾಸ್ಪದವಾಗಿ ಹಾರಾಡುತ್ತಿದ್ದ ಪಾರಿವಾಳವೊಂದನ್ನು ಜಮ್ಮು ಮತ್ತು ಕಾಶ್ಮೀರದ ಖತುವಾ ಜಿಲ್ಲೆ ಬಳಿ ಸೆರೆ ಹಿಡಿಯಲಾಗಿದೆ.
ಗಡಿ ಭಾಗದ ಹೀರಾನಗರ್ ಸೆಕ್ಟರ್‌ನ ಮಾನ್ಯಾರಾ ಗ್ರಾಮದಲ್ಲಿ ವಾಸಿಸುತ್ತಿದ್ದ ಜನರು ಪಾರಿವಾಳವನ್ನು ಹಿಡಿದಿದ್ದಾರೆ. ಪಾರಿವಾಳದ ದೇಹದ ಮೇಲ್ಮೈ ಭಾಗದಲ್ಲಿ ಬಣ್ಣದ ಗುರುತುಗಳು ಕಂಡು ಬಂದಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಮಿಶ್ರಾ ತಿಳಿಸಿದ್ದಾರೆ.
ಬೇಹುಗಾರಿಕೆ ನಡೆಸಲು ಪಾಕಿಸ್ತಾನ ಕಡೆಯಿಂದ ಪಾರಿವಾಳವನ್ನು ಭಾರತದ ಗಡಿ ಭಾಗಕ್ಕೆ ಬಿಟ್ಟಿರಬಹುದು ಎಂದು ಶಂಕಿಸಲಾಗಿದೆ, ಪಾರಿವಾಳದ ಕಾಲಿನ ಬಳಿ ಕೋಡ್ ನಂಬರ್ ಹೊಂದಿರುವ ರಿಂಗ್ ಇದೆ. ಇದನ್ನು ಹೊರತು ಪಡಿಸಿದಂತೆ ಬೇರೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸದ್ಯ ಪಾರಿವಾಳವನ್ನು ಮತ್ತಷ್ಟು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.