Advertisement

ನಮ್ಮ ಗುಪ್ತಚರ ಇಲಾಖೆ ಉಗ್ರರನ್ನು ರಕ್ಷಿಸ್ತಿದೆ; ಪಾಕ್ ಸ್ಪೈ ಅಧಿಕಾರಿ!

06:02 PM Sep 26, 2017 | Sharanya Alva |

ಇಸ್ಲಾಮಾಬಾದ್: ಹೌದು ನಮ್ಮ ದೇಶದ ಬೇಹುಗಾರಿಕೆ ಸಂಸ್ಥೆ ಭಯೋತ್ಪಾದಕರನ್ನು ರಕ್ಷಿಸುತ್ತಿದೆ ಎಂದು ಸ್ವತಃ ಪಾಕಿಸ್ತಾನದ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಆರೋಪಿಸಿದ್ದು, ಈ ಬಗ್ಗೆ ಸೂಕ್ತವಾಗಿ ತನಿಖೆ ನಡೆಸಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಇಂಟೆಲಿಜೆನ್ಸ್ ಬ್ಯೂರೋ(ಐಬಿ)ದ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಮಲಿಕ್ ಮುಖ್ತರ್ ಅಹ್ಮದ್ ಶಾಹಜಾದ್ ಅವರು, ಶಂಕಿತ ಭಯೋತ್ಪಾದಕರ ವಿರುದ್ಧ ತಮ್ಮ ಹಿರಿಯ ಅಧಿಕಾರಿಗಳು ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ದೂರಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next