Advertisement

ಪಾಕ್‌ ಟಿವಿ ಡಿಬೆಟ್‌ ವೇಳೆ ಪತ್ರಕರ್ತ, ರಾಜಕಾರಣಿಯ ಹೊಡೆದಾಟ

09:03 AM Jun 27, 2019 | Vishnu Das |

ಇಸ್ಲಮಾಬಾದ್‌: ಪಾಕಿಸ್ಥಾನದಲ್ಲಿ ಟಿವಿ ಲೈವ್‌ ಚರ್ಚಾ ಕಾರ್ಯಕ್ರಮವೊಂದರಲ್ಲಿ ರಾಜಕಾರಣಿಯೊಬ್ಬ ಕಾರ್ಯಕ್ರಮ ನಿರೂಪಿಸುತ್ತಿದ್ದ ಪತ್ರಕರ್ತನ ಮೇಲೆರಗಿ ಬಡಿದಾಡಿಕೊಂಡ ಘಟನೆ ನಡೆದಿದ್ದು, ನೇರ ಪ್ರಸಾರವಾಗುತ್ತಿದ್ದಾಗಲೆ ಹೊಡೆದಾಟ ನಡೆದಿದ್ದು ವಿಡಿಯೋ ವೈರಲ್‌ ಆಗಿದೆ.

Advertisement

ಇಮ್ರಾನ್‌ ಖಾನ್‌ ಅವರ ಪಾಕಿಸ್ಥಾನ್‌ ತೆಹರೀಕ್‌ ಇ ಇನ್ಸಾಫ್ ಪಕ್ಷದ ನಾಯಕ ಮನ್ಸೂರ್‌ ಅಲಿ ಸಿಯಾನ್‌ ಪತ್ರಕರ್ತ ಇಮ್ತಿಯಾಜ್‌ ಖಾನ್‌ ಫ‌ರ್ಹಾನ್‌ ಮೇಲೆ ಹಲ್ಲೆ ನಡೆಸಿದ್ದಾರೆ.

ಚರ್ಚೆ ನಡೆಯುತ್ತಿದ್ದ ವೇಳೆ ಇಮ್ತಿಯಾಜ್‌ ಕೇಳಿದ ಪ್ರಶ್ನೆಯಿಂದ ರೊಚ್ಚಿಗೆದ್ದ ಮನ್ಸೂರ್‌ ಏಕಾಏಕಿ ಎದ್ದು ಹಲ್ಲೆ ನಡೆಸಲು ಆರಂಭಿಸಿದ್ದಾರೆ.

ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದು, ತಕ್ಷಣ ಸ್ಟುಡಿಯೋದಲ್ಲಿದ್ದ ಸಿಬಂದಿಗಳು ಇಬ್ಬರನ್ನು ಬೇರ್ಪಡಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next