Advertisement

ಭಾರತ ವಿರೋಧಿ ಹುಚ್ಚು: ಪಾಕ್‌ನಲ್ಲಿ ಟೊಮೆಟೋ ಕೆಜಿಗೆ 300 ರೂ.

07:15 PM Oct 27, 2017 | udayavani editorial |

ಇಸ್ಲಾಮಾಬಾದ್‌ : ಪಾಕಿಸ್ಥಾನದ ಲಾಹೋರ್‌ ಮತ್ತು ಇತರ ಪ್ರಮುಖ ನಗರಗಳಲ್ಲಿ ಟೊಮೆಟೋ ಕೇಜಿಗೆ 300 ರೂ. ದಾಟಿದೆ. ಇದಕ್ಕೆ ಭಾರತವೇ ಕಾರಣವೆಂದು ಅಲ್ಲಿನ ರಾಜಕಾರಣಿಗಳು ಜನರಲ್ಲಿ ಭಾರತ ವಿರೋಧಿ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. 

Advertisement

ಪಾಕಿಸ್ಥಾನದಲ್ಲಿ ಟೊಮೆಟೋ ಕೊರತೆ ಉಂಟಾದಾಗೆಲ್ಲ ಭಾರತದಿಂದ ಅದನ್ನು ಪರ್ಯಾಪ್ತ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದು ರೂಢಿ.

ಆದರೆ ಭಯೋತ್ಪಾದನೆ, ಕದನ ವಿರಾಮ ಉಲ್ಲಂಘನೆ, ಭಾರತಕ್ಕೆ ಉಗ್ರರ ರವಾನೆ ಮುಂತಾದ ಕಾರಣಗಳಿಗಾಗಿ ಉಭಯ ದೇಶಗಳ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿರುವುದರಿಂದ ಪಾಕಿಸ್ಥಾನಕ್ಕೆ ಭಾರತದಿಂದ ಟೊಮೆಟೋ ಆಮದು ಮಾಡಿಕೊಳ್ಳುವ ಮನಸ್ಸಿಲ್ಲ; ಅದು ತನಗೆ ಅವಮರ್ಯಾದೆ ಎಂಬ ಭಾವನೆ ! ಪರಿಣಾಮವಾಗಿ ಪಾಕಿಸ್ಥಾನದಲ್ಲಿ ಟೊಮೆಟೋ ಕೊರತೆಯಿಂದಾಗಿ ಅದರ ಬೆಲೆ ಗಗನ ಮುಖೀಯಾಗಿದೆ.

ಭಾರತದಿಂದ ಟೊಮೆಟೋ ಆಮದಿಸಿಕೊಳ್ಳಲು ಅನುಮತಿ ನೀಡದ ಪಾಕ್‌ ಸರಕಾರದ ನೀತಿಯನ್ನು ಕಟುವಾಗಿ ಟೀಕಿಸಿದೆ.  ಪಾಕಿಸ್ಥಾನದ ವ್ಯಾಪಾರ-ವಹಿವಾಟು ವಿರೋಧಿ ನೀತಿಯಿಂದಾಗಿ ದೇಶದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಡಾನ್‌ ಹೇಳಿದೆ. 

“ನಮ್ಮ ರೈತರನ್ನು ಕಡೆಗಣಿಸಿ ವಿದೇಶೀ ರೈತರಿಗೆ ನಾವ್ಯಾಕೆ ಲಾಭ ಮಾಡಿಕೊಡಬೇಕು?’ ಎಂದು ಪಾಕ್‌ ನೀತಿಯನ್ನು ಸಮರ್ಥಿಸಿಕೊಳ್ಳುತ್ತಿರುವ ಸಚಿವರ ತಲೆಯ ಮೇಲೆ ಕೊಳೆತ ಟೊಮೆಟೋಗಳನ್ನು ಸುರಿಯಬೇಕು ಎಂದು ಡಾನ್‌ ತನ್ನ ಲೇಖನದಲ್ಲಿ ಹೇಳಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next