Advertisement

ಭಾರತೀಯ ದಂಪತಿಯನ್ನು ಕೊಂದ ಪಾಕ್‌ ವ್ಯಕ್ತಿ

11:00 AM Jun 25, 2020 | mahesh |

ದುಬಾೖ: ಭಾರತೀಯ ದಂಪತಿಯ ಮನೆಗೆ ದರೋಡೆ ಮಾಡಲು ನುಗ್ಗಿದ ಪಾಕಿಸ್ಥಾನಿ ವ್ಯಕ್ತಿಯೊಬ್ಬ ದಂಪತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ದುಬಾೖನ ಅರೇಬಿಯನ್‌ ರಾಂಚಸ್‌ನಲ್ಲಿ ನಡೆದಿದೆ. ಹಿರೇನ್‌ ಆಧಿಯ ಮತ್ತು ವಿಧಿ ಆಧಿಯ ಕೊಲೆಯಾದ ದಂಪತಿ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರ ತಂದೆ ತಾಯಿ ಹತ್ಯೆಗೀಡಾದ ವಿಷಯವನ್ನು ಅವರ 18 ವರ್ಷ ವಯಸ್ಸಿನ ಮಗಳು ಪೊಲೀಸರಿಗೆ ಕರೆ ಮಾಡಿ ಹೇಳಿದ್ದಾಳೆ. ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆಯೇ ಆತ ದಂಪತಿಯನ್ನು ಇರಿದು ಕೊಂದಿದ್ದಾನೆ. ದುಬೈ ಪೊಲೀಸರು ಪಾಕಿಸ್ಥಾನಿ ವ್ಯಕ್ತಿಯನ್ನು ಘಟನೆ ನಡೆದ 24 ಗಂಟೆಗಳ ಒಳಗೆ ಬಂಧಿಸಿದ್ದಾರೆ ಎಂದು ಇಲ್ಲಿಯ ಪತ್ರಿಕೆ ವರದಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next