ಶ್ರೀನಗರ: 2008ರಲ್ಲಿ ಮುಂಬಯಿ ದಾಳಿಯ ರೂವಾರಿ, ಉಗ್ರ ಝಕಿಯುರ್ ರೆಹಮಾನ್ ಲಖ್ವಿಯಿಂದ ತರಬೇತಿ ಪಡೆದ ಉಗ್ರನನ್ನು ಬುಧವಾರ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಆತನನ್ನು ಲಷ್ಕರ್-ಎ-ತೊಯ್ಬಾ ಸಂಘಟನೆಯ ಮೊಹಮ್ಮದ್ ವಕಾರ್ ಅವಾನ್ ಎಂದು ಗುರುತಿಸಲಾಗಿದೆ. ಕೇಂದ್ರ ಕಾಶ್ಮೀರ ಭಾಗದಲ್ಲಿ ಆತನಿಗೆ ಉಗ್ರ ಚಟುವಟಿಕೆಗಳನ್ನು ಮತ್ತೆ ಶುರು ಮಾಡುವ ಹೊಣೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
69 ಉಗ್ರರ ಸಾವು: ಫೆ.14ರಂದು ಪುಲ್ವಾಮಾ ದಾಳಿ ಬಳಿಕ ಕಾಶ್ಮೀರ ಕಣಿವೆಯಲ್ಲಿ 13 ಮಂದಿ ಪಾಕಿಸ್ತಾನಿ ಯರು ಸೇರಿದಂತೆ 69 ಮಂದಿ ಜೈಶ್-ಎ-ಮೊಹಮ್ಮದ್ ಉಗ್ರರನ್ನು ಕೊಲ್ಲಲಾಗಿದೆ. ಹೀಗಾಗಿ ಕಣಿವೆಯಲ್ಲಿ ಸಂಘಟನೆಯ ನೇತೃತ್ವ ವಹಿಸಲು ಯಾರೂ ಮುಂದಾಗು ತ್ತಿಲ್ಲ ಎಂದು ಲೆ.ಕ.ಕೆ.ಜಿ.ಎಸ್.ಧಿಲ್ಲಾನ್ ಹೇಳಿದ್ದಾರೆ.
ನ್ಯಾಯಾಂಗ ವಶಕ್ಕೆ ಮಲಿಕ್: ಉಗ್ರರಿಗೆ ಮತ್ತು ಪ್ರತ್ಯೇಕತಾವಾದಿಗಳಿಗೆ ಧನ ಸಹಾಯ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್‌ನನ್ನು ಮೇ 24ರವರೆಗೆ ನ್ಯಾಯಾಂಗ ಬಂಧನದಲ್ಲಿರುವಂತೆ ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆದೇಶಿಸಿದೆ.