Advertisement

ಜೈಪುರ್ ಸೆಂಟ್ರಲ್ ಜೈಲಿನೊಳಗೆ ಪಾಕ್ ಉಗ್ರ, ಕೈದಿಯ ಹತ್ಯೆ: IGP ಸಿಂಗ್

11:24 AM Feb 20, 2019 | Team Udayavani |

ಜೈಪುರ: ಪುಲ್ವಾಮ ಉಗ್ರರ ದಾಳಿಗೆ ಸಂಬಂಧಿಸಿದಂತೆ ಭಾರತ, ಪಾಕ್ ನಡುವೆ ಬಿಕ್ಕಟ್ಟು ಹೆಚ್ಚುತ್ತಿರುವ ತನ್ಮಧ್ಯೆ  ಪಾಕಿಸ್ತಾನ ಮೂಲದ ಕೈದಿಯನ್ನು ಸಹ ಕೈದಿಗಳು ಹತ್ಯೆಗೈದಿರುವ ಘಟನೆ ರಾಜಸ್ಥಾನದ ಜೈಪುರ ಸೆಂಟ್ರಲ್ ಜೈಲಿನಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಪಾಕ್ ಮೂಲದ ಜೈಶ್ ಸಂಘಟನೆಯ ಉಗ್ರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಯೋಧರು ಹುತಾತ್ಮರಾದ ಘಟನೆ ಬಳಿಕ ಜೈಪುರ್ ಜೈಲಿನಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಸಿಮಿ ಉಗ್ರಗಾಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ) ಸಂಘಟನೆಯ ಉಗ್ರನಾಗಿರುವ ಶಾಕೀರುಲ್ಲಾ ಅಲಿಯಾಸ್ ಮೊಹಮ್ಮದ್ ಹನೀಫ್ ಎಂಬಾತನನ್ನು ಸಹ ಕೈದಿಗಳು ಹತ್ಯೆಗೈದಿದ್ದಾರೆ. ಗೂಢಚಾರಿಕೆ ಮಾಡುತ್ತಿದ್ದ ಆರೋಪದಲ್ಲಿ ಹನೀಫ್ ಗೆ ಕೋರ್ಟ್ ಜೈಲುಶಿಕ್ಷೆ ವಿಧಿಸಿತ್ತು ಎಂದು ವರದಿ ವಿವರಿಸಿದೆ.

ಜೈಲಿನೊಳಗೆ ಪಾಕ್ ಮೂಲದ ಕೈದಿಯನ್ನು ಕೊಂದಿರುವ ಘಟನೆಯನ್ನು ಜೈಪುರ್ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ರುಪಿಂದರ್ ಸಿಂಗ್ ಖಚಿತಪಡಿಸಿದ್ದಾರೆ. ಘಟನೆಯಲ್ಲಿ ಮೂವರು ಇತರ ಕೈದಿಗಳು ಶಾಮೀಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next