ಜಲಂಧರ್: ಆನ್‌ಲೈನ್ ನಲ್ಲಿ ಲಾಹೋರ್ ಮೂಲದ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜಲಂಧರ್ ಮೂಲದ ಹುಡುಗ ಮದುವೆಗೆ ಬರಲು ವಧುವಿಗೆ ಅವಕಾಶ ಕೋರಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕಮಲ್ ಕಲ್ಯಾಣ್ ಅವರು 2018ರ ಜನವರಿಯಲ್ಲಿ ಲಾಹೋರ್ನಲ್ಲಿ ದೂರದ ಸಂಬಂಧಿ ಶುಮೈಲಾ ಅವರ ಜೊತೆ ಆನ್‌ಲೈನ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮದುವೆಯನ್ನು ಮಾರ್ಚ್‌ನಲ್ಲಿ ಭಾರತದಲ್ಲೇ ನಡೆಸಬೇಕೆಂದು ನಿರ್ಧರಿಸಲಾಗಿತ್ತು. ಅದಕ್ಕೆ ವಧುವಿನ ಮನೆಯವರೂ ಒಪ್ಪಿದ್ದರು. ಆದರೆ, ಮದುವೆಗೆ ಅಂತಿಮ ತಯಾರಿ ನಡೆಯುತ್ತಿದ್ದಾಗಲೇ ಲಾಕ್‌ಡೌನ್ ಶುರುವಾಗಿತ್ತು.
ಹಾಗಾಗಿ, ವೀಸಾಕ್ಕಾಗಿ ವಧುವಿನ ಕುಟುಂಬ ಪ್ರಯತ್ನಿಸುತ್ತಿದ್ದರೂ, ಅದು ಕೈಗೂಡುತ್ತಿಲ್ಲ. ಏಕೆಂದರೆ, ಲಾಕ್‌ಡೌನ್ ಅವಧಿಯಲ್ಲಿ ಅವರಿಗೆ ಭಾರತ ಸರಕಾರಕ್ಕೆ ಸಕಾಲದಲ್ಲಿ ದಾಖಲೆ ಕಳುಹಿಸಲು ಸಾಧ್ಯವಾಗಿಲ್ಲ. ಈಗಲೂ ಸಾಧ್ಯವಾಗುತ್ತಿಲ್ಲ.
ಅಂತಾರಾಷ್ಟ್ರೀಯ ಕೊರಿಯರ್ ಸೇವೆ ಬಗ್ಗೆ ಪರಿಶೀಲಿಸುತ್ತಿದ್ದು, ವಿಮಾನಗಳು ಪುನರಾರಂಭಗೊಂಡ ನಂತರ ಕೊರಿಯರ್ ಸೇವೆಗಳು ಶುರುವಾಗಲಿವೆ. ಹಾಗಾಗಿ, ತಾಯಿ, ಸಹೋದರ ಮತ್ತು ಅವನ ಭಾವಿ ಪತ್ನಿ ಮದುವೆಗೆ ಬರಲು ಬಯಸಿದ್ದು, ಅವರನ್ನು ಮಾತ್ರ ಭಾರತಕ್ಕೆ ಕರೆಯಿಸಿಕೊಳ್ಳಲು ವಿಶೇಷ ಅನುಮತಿ ಕೊಡಬೇಕೆಂದು ಮೋದಿಯವರಲ್ಲಿ ಮನವಿ ಮಾಡಿದ್ದಾರೆ. ಇತ್ತೀಚೆಗೆ, ಜಲಂಧರ್‌ನಲ್ಲೇ ನಡೆದಿದ್ದ ಮತ್ತೂಂದು ವಿವಾಹದಲ್ಲಿ ಪಾಕಿಸ್ಥಾನ ವಧುವಿಗೆ ವೀಸಾ ನೀಡಲಾಗಿದ್ದು, ಅದೇ ರೀತಿ ತನಗೂ ಅನುಮತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ.