Advertisement

ಲಂಕೆಯಲ್ಲಿ ಸಿಕ್ಕಿಬಿದ್ದ ಪಾಕ್‌ ಕ್ರೀಡಾಪಟುಗಳು

01:24 AM Apr 28, 2020 | Team Udayavani |

ಕೊಲಂಬೊ: ಶ್ರೀಲಂಕಾಕ್ಕೆ ಪ್ರವಾಸ ತೆರಳಿದ್ದ ಪಾಕಿಸ್ಥಾನದ ಕ್ರೀಡಾಪಟುಗಳು ಕೋವಿಡ್ 19 ಕಾರಣದಿಂದ ಕೊಲಂಬೊದಲ್ಲೇ ಉಳಿದಿರುವ ಸುದ್ದಿಯೊಂದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಸುಮಾರು 12 ಮಂದಿ ಪ್ರಥಮ ದರ್ಜೆ ಕ್ರಿಕೆಟಿಗರು ಮತ್ತು 3 ಮಂದಿ ಟೆನಿಸಿಗರು ದ್ವೀಪರಾಷ್ಟ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರವಾಸಕ್ಕೆ ತೆರಳಿದ್ದ ಕ್ರಿಕೆಟಿಗ ಅಜರ್‌ ಅಟ್ಟಾರಿ, ತಾವು ಇನ್ನೂ ಶ್ರೀಲಂಕಾದಲ್ಲೇ ಉಳಿದಿರುವ ಸಂಗತಿಯನ್ನು ದೂರವಾಣಿ ಮೂಲಕ ತಿಳಿಸಿದ್ದಾರೆ. ತವರಿಗೆ ಮರಳುವುದನ್ನೇ ಕಾಯುತ್ತಿದ್ದೇವೆ ಎಂದಿದ್ದಾರೆ. ಕೊಲಂಬೊದಲ್ಲಿ ಮತ್ತೆ ಲಾಕ್‌ಡೌನ್‌ ಮುಂದುವರಿದ ಕಾರಣ ಇಲ್ಲಿ ಉಳಿಯುವುದೇ ದೊಡ್ಡ ಸವಾಲಾಗಿದೆ ಎಂಬುದು ಮತ್ತೋರ್ವ ಕ್ರಿಕೆಟಿಗ ಅಬಿದ್‌ ಹಸನ್‌ ಅವರ ಅಳಲು. ಸದ್ಯ ಕ್ರೀಡಾಳುಗಳೆಲ್ಲ ಪಾಕ್‌ ರಾಯಭಾರ ಕಚೇರಿಯ ಸಂಪರ್ಕದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next