Advertisement

ತ್ರಿಕೋನ ಟಿ20 ಸರಣಿ: ಪಾಕಿಸ್ಥಾನಕ್ಕೆ ಆರು ವಿಕೆಟ್‌ ಗೆಲುವು

10:56 PM Oct 08, 2022 | Team Udayavani |

ಕ್ರೈಸ್ಟ್‌ಚರ್ಚ್‌: ಬಾಬರ್‌ ಅಜಮ್‌, ಹ್ಯಾರಿಸ್‌ ರವೂಫ್ ಮತ್ತು ಶಾದಾಬ್‌ ಖಾನ್‌ ಅವರ ಉತ್ತಮ ಆಟದಿಂದಾಗಿ ಪಾಕಿಸ್ಥಾನ ತಂಡವು ತ್ರಿಕೋನ ಟಿ20 ಸರಣಿಯ ದ್ವಿತೀಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ತಂಡವು ಹ್ಯಾರಿಸ್‌ ರವೂಫ್ ದಾಳಿಗೆ ತತ್ತರಿಸಿ 8 ವಿಕೆಟಿಗೆ 147 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮತ್ತೆ ಮಿಂಚಿದ ರವೂಫ್ 28 ರನ್ನಿಗೆ 3 ವಿಕೆಟ್‌ ಪಡೆದರು.

ಮೊಹಮ್ಮದ್‌ ವಸೀಮ್‌ ಮತ್ತು ಮೊಹಮ್ಮದ್‌ ನವಾಜ್‌ ತಲಾ 2 ವಿಕೆಟ್‌ ಹಾರಿಸಿದರು. ಇದಕ್ಕುತ್ತರವಾಗಿ ಬಾಬರ್‌ ಅಜಮ್‌ ಅವರ ಭರ್ಜರಿ ಆಟ ಮತ್ತು ಕೊನೆ ಹಂತದಲ್ಲಿ ಶಾದಾಬ್‌ ಖಾನ್‌ ಅವರ ಮಿಂಚಿನ ಆಟದಿಂದಾಗಿ ಪಾಕಿಸ್ಥಾನ ತಂಡವು ಇನ್ನೂ 10 ಎಸೆತಗಳು ಬಾಕಿ ಇರುತ್ತಲೇ 4 ವಿಕೆಟಿಗೆ 149 ರನ್‌ ಗಳಿಸಿ ಗೆಲುವು ದಾಖಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next