Advertisement

3 ವರ್ಷಕ್ಕೆ ವಿಶ್ವ ಇಲೆವೆನ್‌ಗೆ ಆತಿಥ್ಯ

07:40 AM Sep 14, 2017 | Team Udayavani |

ಲಾಹೋರ್‌: ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟ್ವೆಂಟಿ20 ಪಂದ್ಯದಲ್ಲಿ ಪಾಕಿಸ್ಥಾನವು ವಿಶ್ವ ಇಲೆವೆನ್‌ ತಂಡವನ್ನು 20 ರನ್ನುಗಳಿಂದ ಸೋಲಿಸುವ ಮೂಲಕ ದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಯಶಸ್ವಿಯಾಗಿ ಪುನರಾರಂಭಗೊಂಡಿದೆ. 

Advertisement

ಇದರಿಂದ ಸಂಭ್ರಮಗೊಂಡಿರುವ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಚೇರ್ಮನ್‌ ನಜಂ ಸೇಥಿ ಅವರು ಮುಂದಿನ ಎರಡೂ ವರ್ಷವೂ ವಿಶ್ವ ಇಲೆವೆನ್‌ ಪಾಕಿಸ್ಥಾನಕ್ಕೆ ಪ್ರವಾಸಗೈಯಲಿದೆ ಎಂದು ತಿಳಿಸಿದ್ದಾರೆ.

ವಿಶ್ವ ಇಲೆವೆನ್‌ ಸರಣಿಯನ್ನು ಮುಂದಿನ ಮೂರು ವರ್ಷ ಆಯೋಜಿಸಲು ಯೋಚಿಸಲಾಗಿದೆ. ಇದು ಮೊದಲ ವರ್ಷ ಮುಂದಿನ ಎರಡೂ ವರ್ಷ ಈ ಸರಣಿ ನಡೆಯಲಿದೆ ಎಂದು ಸೇಥಿ ಹೇಳಿದ್ದಾರೆ.

ಒಮ್ಮೆ ಈ ವಿಶ್ವ ಇಲೆವೆನ್‌ ಸರಣಿ ಮುಗಿದ ಬಳಿಕ ಶ್ರೀಲಂಕಾ ತಂಡವು ಮುಂದಿನ ತಿಂಗಳು ಲಾಹೋರ್‌ನಲ್ಲಿ ಒಂದು ಅಥವಾ ಎರಡು ಪಂದ್ಯಗಳಲ್ಲಿ ಆಡುವ ಬದ್ಧತೆ ವ್ಯಕ್ತಪಡಿಸಿದೆ ಮತ್ತು ನವೆಂಬರ್‌ನಲ್ಲಿ ವೆಸ್ಟ್‌ಇಂಡೀಸ್‌ ಮೂರು ಪಂದ್ಯಗಳನ್ನು ಆಡಲು ಒಪ್ಪಿಗೆ ಸೂಚಿಸಿದೆ ಎಂದು ಅವರು ವಿವರಿಸಿದರು.

ಒಂದು ವೇಳೆ ಈ ಮೂರು ಕೂಟ ನಡೆಯುವ ವೇಳೆ ಯಾವುದೆ ಅಹಿತಕರ ಘಟನೆ ನಡೆಯದಿದ್ದರೆ ಮುಂದಿನ ವರ್ಷ ಖಂಡಿತವಾಗಿಯೂ ಇನ್ನೂ ಕೆಲವು ದೊಡ್ಡ ತಂಡಗಳು ಪಾಕಿಸ್ಥಾನಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ ಎಂದು ನಂಬಿದ್ದೇನೆ ಎಂದು ಸೇಥಿ ಭರವಸೆ ನೀಡಿದರು.

Advertisement

ದೇಶವು ಭಯೋತ್ಪಾದನೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದೆ. ಇದು ಪಾಕಿಸ್ಥಾನಕ್ಕೆ ಹೆಚ್ಚೆಚ್ಚು ಅಂತಾರಾಷ್ಟ್ರೀಯ ತಂಡಗಳು ಬಂದು ಕ್ರಿಕೆಟ್‌ ಆಡಲು ನೆರವಾಗಿದೆ. ಭಯೋತ್ಪಾದನೆಯ ವಿರುದ್ಧ ಯುದ್ಧ ಕೊನೆ ಹಂತದಲ್ಲಿದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ ಮತ್ತು 90ರಿಂದ 95 ಶೇಕಡಾದಷ್ಟು ಭಯೋತ್ಪಾದನೆಯನ್ನು ಶಮನ ಮಾಡಲಾಗಿದೆ  ಎಂದವರು ವಿವರಿಸಿದರು.

ಐಸಿಸಿ ಮತ್ತು ವಿವಿಧ ಮಂಡಳಿಯ ಭದ್ರತಾ ತಜ್ಞರು ಲಾಹೋರ್‌ಗೆ ಆಗಮಿಸಿ ಇಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅದ್ಭುತ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಆಟಗಾರರಿಗೆ ಕಲ್ಪಿಸಿದ್ದೇವೆ. ಇದರಿಂದ ಖುಷಿಗೊಂಡ ತಜ್ಞರು ವಿಶ್ವ ಇಲೆವನ್‌ ಇಲ್ಲಿಗೆ ಪ್ರಯಾಣಿಸಲು ಅನುವು  ಮಾಡಿಕೊಟ್ಟಿದ್ದಾರೆ ಎಂದು ಸೇಥಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next