Advertisement

ರೋಚಕ ಘಟ್ಟದಲ್ಲಿ ಲಾಹೋರ್‌ ಟೆಸ್ಟ್‌ 

10:47 PM Mar 24, 2022 | Team Udayavani |

ಲಾಹೋರ್‌: ಪಾಕಿಸ್ಥಾನ-ಆಸ್ಟ್ರೇಲಿಯ ನಡುವಿನ ಲಾಹೋರ್‌ ಟೆಸ್ಟ್‌ ಪಂದ್ಯ ರೋಚಕ ಹಂತ ತಲುಪಿದೆ.

Advertisement

ಆಸೀಸ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ ನೀಡಿದ ದಿಟ್ಟ ಡಿಕ್ಲರೇಷನ್‌ನಿಂದಾಗಿ ಪಾಕ್‌ ಜಯಕ್ಕೆ 351 ರನ್‌ ಗುರಿ ಲಭಿಸಿದೆ. 4ನೇ ದಿನದಾಟದ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 73 ರನ್‌ ಗಳಿಸಿದೆ. ಅಂತಿಮ ದಿನವಾದ ಶುಕ್ರವಾರ 278 ರನ್‌ ಗಳಿಸಬೇಕಿದೆ. ಪಿಚ್‌ ಬ್ಯಾಟಿಂಗ್‌ಗೆ ಸಹಕರಿಸುತ್ತಿದ್ದು, ಪಾಕ್‌ ಈ ಮೊತ್ತವನ್ನು ಬೆನ್ನಟ್ಟಿ ಗೆದ್ದರೂ ಅಚ್ಚರಿಪಡಬೇಕಿಲ್ಲ. ಕರಾಚಿ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಪಾಕ್‌ 171.4 ಓವರ್‌ಗಳ ಬ್ಯಾಟಿಂಗ್‌ ನಡೆಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು.

123 ರನ್ನುಗಳ ಮೊದಲ ಇನ್ನಿಂಗ್ಸ್‌ ಮುನ್ನಡೆ ಬಳಿಕ ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯ, 3ಕ್ಕೆ 227 ರನ್‌ ಗಳಿಸಿ ಡಿಕ್ಲೇರ್‌ ಮಾಡಿತು. ಮತ್ತೂಮ್ಮೆ ಪ್ರಚಂಡ ಬ್ಯಾಟಿಂಗ್‌ ನಡೆಸಿದ ಉಸ್ಮಾನ್‌ ಖ್ವಾಜಾ ಅಜೇಯ 104 ರನ್‌ ಬಾರಿಸಿದರು. ಇದು ಅವರ ಸತತ 2ನೇ ಟೆಸ್ಟ್‌ ಶತಕ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-391 ಮತ್ತು 3 ವಿಕೆಟಿಗೆ 227 ಡಿಕ್ಲೇರ್‌. ಪಾಕಿಸ್ಥಾನ-268 ಮತ್ತು ವಿಕೆಟ್‌ ನಷ್ಟವಿಲ್ಲದೆ 73.

Advertisement

Udayavani is now on Telegram. Click here to join our channel and stay updated with the latest news.

Next