Advertisement

‘ಗ್ರೇ ಲಿಸ್ಟ್‌’ನಲ್ಲೇ ಇರಲಿದೆ ಪಾಕ್‌

02:31 AM Jun 26, 2020 | Hari Prasad |

ಹೊಸದಿಲ್ಲಿ: ತನ್ನ ಮಣ್ಣಲ್ಲಿ ಉಗ್ರರನ್ನು ಪೋಷಿಸಿ ಇತರೆ ದೇಶಗಳ ವಿರುದ್ಧ ಛೂ ಬಿಡುವ ಪಾಕಿಸ್ಥಾನವನ್ನು ಅಕ್ಟೋಬರ್‌ವರೆಗೂ ಭಯೋತ್ಪಾದನಾ ಧನಸಹಾಯ ನಿಗ್ರಹ ಪಡೆ (ಎಫ್ಎಟಿಎಫ್) ಬೂದು ಪಟ್ಟಿಯಲ್ಲಿ ಮುಂದುವರಿಸಿದೆ.

Advertisement

ಪಾಕಿಸ್ಥಾನವು ಈಗಲೂ ಉಗ್ರರಿಗೆ ಸುರಕ್ಷಿತ ಸ್ವರ್ಗವಾಗಿದೆ ಎಂದು ಅಮೆರಿಕದ ವರದಿಯೊಂದು ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಬುಧವಾರ ನಡೆದ ಹಣಕಾಸು ಕಾರ್ಯಪಡೆಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಂಬಂಧ ಪಾಕಿಸ್ಥಾನಕ್ಕೆ ಕೆಲವೊಂದು ಕಾರ್ಯಸೂಚಿಗಳನ್ನು ನೀಡಿದ್ದರೂ, ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ಆ ಕಾರ್ಯಸೂಚಿ ಪಾಲನೆ ಆಗಿದೆಯೇ ಎಂಬುದನ್ನು ಸದ್ಯಕ್ಕೆ ಪರಿಗಣಿಸಿಲ್ಲ. ಕಾರ್ಯಸೂಚಿಯಲ್ಲಿನ 27 ಅಂಶಗಳ ಪೈಕಿ ಪಾಕ್‌ ಇನ್ನೂ 13 ಅಂಶಗಳನ್ನು ಪೂರ್ಣಗೊಳಿಸಲು ಬಾಕಿಯಿದೆ.

ಅಕ್ಟೋಬರ್‌ನಲ್ಲಿ ನಡೆಯುವ ಮುಂದಿನ ಸಭೆಯಲ್ಲಿ ಈ ಕುರಿತು ಪರಿಶೀಲಿಸಲಾಗುತ್ತದೆ. ಅಲ್ಲಿಯವರೆಗೂ ಪಾಕಿಸ್ಥಾನವನ್ನು ಬೂದು ಪಟ್ಟಿಯಲ್ಲಿ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ಸ್ಥಗಿತಗೊಳಿಸುವಲ್ಲಿ ವಿಫ‌ಲವಾದ ಕಾರಣ 2018ರಿಂದಲೂ ಪಾಕ್‌ ಈ ಪಟ್ಟಿಯಲ್ಲೇ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next