Advertisement
ಇಸ್ಲಾಮೋಫೋಬಿಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ರಾಯಭಾರಿಗಳ ಅನೌಪಚಾರಿಕ ಗುಂಪು ಹುಟ್ಟುಹಾಕುವ ಪಾಕ್ ಯತ್ನವನ್ನು ಯುಎಇ ಮತ್ತು ಮಾಲ್ಡೀವ್ಸ್ ವಿಫಲಗೊಳಿಸಿವೆ ಎಂದು ಸ್ವತಃ ಪಾಕಿಸ್ಥಾನದ ಪತ್ರಿ ಕೆ “ಡಾನ್’ ವರದಿ ಮಾಡಿದೆ.
ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಕೂಡ ಪಾಕಿಸ್ಥಾನದ ಈ ನಿಲುವನ್ನು ಬೆಂಬಲಿಸಲಿಲ್ಲ. ಕೇವಲ ವಿದೇಶಾಂಗ ಸಚಿವರು ಮಾತ್ರ ಇಂತಹ ಗುಂಪನ್ನು ರಚಿಸಿಕೊಳ್ಳಬಹುದು ಎಂದು ಅದು ಪ್ರತಿಪಾದಿಸಿದೆ ಎಂದು “ಡಾನ್’ ವರದಿ ಮಾಡಿದೆ.
Related Articles
ವಿಶ್ವಸಂಸ್ಥೆಯಲ್ಲಿ ಮಾಲ್ಡೀವ್ಸ್‌ನ ಖಾಯಂ ಪ್ರತಿನಿಧಿ ಥಿಲ್ಮೀಜಾ ಹುಸೇನ್ ಮಾತನಾಡಿ, ಇಸ್ಲಾಮೋಫೋಬಿಯಾ ಅಥವಾ ಇನ್ನಿತರ ಯಾವುದೇ ರಾಜಕೀಯ ಅಥವಾ ಇತರ ಕಾರಣ ಗಳಿಗಾಗಿ ಹಿಂಸೆಯನ್ನು ಪ್ರಚೋದಿಸುವ ಯತ್ನವನ್ನು ಮಾಲ್ಡೀವ್ಸ್ ಖಂಡಿಸುತ್ತದೆ. ಇಂತಹ ಯತ್ನದ ವಿರುದ್ಧ ಕ್ರಮ ಕೈಗೊಳ್ಳಲು ನಾವು ಸಿದ್ಧ. ಆದರೆ ನಿರ್ದಿಷ್ಟವಾಗಿ ಒಂದು ದೇಶವನ್ನು ಗುರಿಯಾಗಿಸಿ ಗುಂಪು ರಚನೆಗೆ ಸಿದ್ಧರಿಲ್ಲ ಎಂದರು.
ಯಾವುದೋ ಪ್ರಚೋದನೆಗೆ ಒಳಗಾಗಿ ಒಂದಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಬರಹಗಳು, ಹೇಳಿಕೆಗಳು, ತಪ್ಪು ಮಾಹಿತಿಯ ಅಭಿಯಾನವನ್ನು ಭಾರತದ 130 ಕೋಟಿ ಜನರ ಭಾವನೆಗಳ ಪ್ರತಿನಿಧಿಯಾಗಿ ನಿರ್ಣ ಯಿಸ ಬಾರದು ಎಂದೂ ಥಿಲ್ಮೀಜಾ ಹೇಳಿದರು.
Advertisement