Advertisement

ಪಾಕಿಸ್ಥಾನದಿಂದ ಸಮ್‌ಝೋತಾ ಎಕ್ಸ್‌ಪ್ರೆಸ್‌ ರೈಲು ಸೇವೆ ರದ್ದು

07:12 AM Feb 28, 2019 | udayavani editorial |

ಲಾಹೋರ್‌ : ಭಾರತ – ಪಾಕ್‌ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ನಡುವೆಯೇ ಪಾಕ್‌ ಅಧಿಕಾರಿಗಳು ಉಭಯ ದೇಶಗಳ ನಡುವಿನ ಸಮ್‌ಝೋತಾ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಮಂದಿನ ಆದೇಶದ ತನಕ ಅಮಾನತುಗೊಳಿಸಿದ್ದಾರೆ ಎಂದು ಅಧಿಕಾರಿಗಳು ಇಂದು ಗುರುವಾರ ತಿಳಿಸಿದ್ದಾರೆ.

Advertisement

ವಾರಕ್ಕೆರಡು ಬಾರಿಯ ಸಮ್‌ಝೋತಾ ಎಕ್ಸ್‌ಪ್ರೆಸ್‌ ರೈಲು ಪ್ರತೀ ಸೋಮವಾರ ಮತ್ತು ಗುರುವಾರ ಲಾಹೋರ್‌ನಿಂದ ಹೊರಡುತ್ತದೆ. ಇಂದು ಗುರುವಾರ ಈ ರೈಲಿನಲ್ಲಿ ಪ್ರಯಾಣಿಸಲಿದ್ದವರ ಸಂಖ್ಯೆ ಕೇವಲ 16 ಇತ್ತು. 

ಇಂದು ಬೆಳಗ್ಗೆ 8 ಗಂಟೆಗೆ ಹೊರಡಲಿದ್ದ ಈ ರೈಲಿನ ಯಾನವನ್ನು ಅದಕ್ಕೆ ಮುನ್ನವೇ ರದ್ದು ಗೊಳಿಸಿ ಪಾಕ್‌ ಅಧಿಕಾರಿಗಳು ಪ್ರಕಟನೆ ಹೊರಡಿಸಿದ್ದರು. ಹಾಗಿದ್ದರೂ ಈ ರೈಲು ಇಂದು ಬೆಳಗ್ಗೆ ಕರಾಚಿಯಿಂದ ತನ್ನ ಯಾನವನ್ನು ಆರಂಭಿಸಿತ್ತು. ರೈಲು ಲಾಹೋರ್‌ಗೆ ಆಗಮಿಸಿದಾಗ ಅದರ ಯಾನ ರದ್ದಾಗಿರುವ ಪ್ರಕಟನೆ ಹೊರಬಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next