ಅಬುಧಾಬಿ : ಮೊಹಮ್ಮದ್ ರಿಜ್ವಾನ್ ನಾಯಕತ್ವದ ಮುಲ್ತಾನ್ ಸುಲ್ತಾನ್ಸ್ ತಂಡ ಮೊದಲ ಬಾರಿಗೆ “ಪಾಕಿಸ್ಥಾನ್ ಸೂಪರ್ ಲೀಗ್’ ಪಂದ್ಯಾವಳಿಯ ಸುಲ್ತಾನ್ ಎನಿಸಿದೆ. ಫೈನಲ್‌ನಲ್ಲಿ ಅದು ವಹಾಬ್ ರಿಯಾಜ್ ನೇತೃತ್ವದ ಪೇಶಾವರ್ ಝಲ್ಮಿ ತಂಡವನ್ನು 47 ರನ್ನುಗಳಿಂದ ಕೆಡವಿತು.
ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಸುಲ್ತಾನ್ಸ್ 4 ವಿಕೆಟಿಗೆ 206 ರನ್ ಪೇರಿಸಿದರೆ, ಪೇಶಾವರ್ ಝಲ್ಮಿ 9 ವಿಕೆಟಿಗೆ 159 ರನ್ ಗಳಿಸಿ ಶರಣಾಯಿತು. ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಈ ಪಂದ್ಯಾವಳಿ ಬಳಿಕ ಯುಎಇಯಲ್ಲಿ ಮುಂದುವರಿದಿತ್ತು.
ಸಂಕ್ಷಿಪ್ತ ಸ್ಕೋರ್: ಮುಲ್ತಾನ್ ಸುಲ್ತಾನ್ಸ್-20 ಓವರ್‌ಗಳಲ್ಲಿ 4 ವಿಕೆಟಿಗೆ 206 (ಶೋಯಿಬ್ ಮಕ್ಸೂದ್ ಔಟಾಗದೆ 65, ರಿಲೀ ರೋಸ್ಯೂ 50, ಶಾನ್ ಮಸೂದ್ 37, ಸಮೀನ್ ಗುಲ್ 26ಕ್ಕೆ 2, ಮೊಹಮ್ಮದ್ ಇಮ್ರಾನ್ 47ಕ್ಕೆ 2). ಪೇಶಾವರ್ ಝಲಿ¾-20 ಓವರ್‌ಗಳಲ್ಲಿ 9 ವಿಕೆಟಿಗೆ 159 (ಶೋಯಿಬ್ ಮಲಿಕ್ 48, ಕಮ್ರಾನ್ ಅಕ್ಮಲ್ 36, ಇಮ್ರಾನ್ ತಾಹಿರ್ 33ಕ್ಕೆ 3, ಬ್ಲೆಸಿಂಗ್ ಮುಜರಾಬನಿ 26ಕ್ಕೆ 2, ಇಮ್ರಾನ್ ಖಾನ್ 27ಕ್ಕೆ 2).
ಇದನ್ನೂ ಓದಿ :ಬೌದ್ಧಿಕ ಹಕ್ಕು ಕಾಯ್ದೆಗಳ ಉಲ್ಲಂಘನೆ ಆರೋಪ : ಪ್ರಸಾದ್ ಟ್ವಿಟರ್ ಖಾತೆ ತಾತ್ಕಾಲಿಕ ಸ್ಥಗಿತ
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಶೋಯಿಬ್ ಮಕ್ಸೂದ್.