Advertisement

ಪಾಕಿಸ್ಥಾನ-ಶ್ರೀಲಂಕಾ: 2ನೇ ಏಕದಿನ ಒಂದು ದಿನ ಮುಂದಕ್ಕೆ

10:38 PM Sep 28, 2019 | Team Udayavani |

ಕರಾಚಿ: ಪಾಕಿಸ್ಥಾನದಲ್ಲಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆರಂಭಗೊಳ್ಳಲು ಮಳೆಗೂ ಇಷ್ಟವಿಲ್ಲವೇನೋ. ಶುಕ್ರವಾರ ಇಲ್ಲಿ ನಡೆಯಬೇಕಿದ್ದ ಪ್ರವಾಸಿ ಶ್ರೀಲಂಕಾ ಎದುರಿನ ಮೊದಲ ಏಕದಿನ ಪಂದ್ಯ ಒಂದೂ ಎಸೆತ ಕಾಣದೆ ಕೊಚ್ಚಿ ಹೋಗಿತ್ತು.

Advertisement

ಸರಣಿಯ 2ನೇ ಮುಖಾಮುಖೀ ರವಿವಾರ ಇಲ್ಲಿಯೇ ನಡೆಯಬೇಕಿತ್ತು. ಆದರೆ ಈ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಅಂಗಳವನ್ನು ಸಿದ್ಧಗೊಳಿಸಲು ಸಿಬಂದಿಗಳಿಗೆ ಹೆಚ್ಚಿನ ಕಾಲಾವಕಾಶ ನೀಡುವುದೇ ಇದರ ಉದ್ದೇಶ ಎಂದು ಪಿಸಿಬಿ ಹೇಳಿದೆ. ಈ ಕುರಿತು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ಪಂದ್ಯವನ್ನು ಮುಂದೂಡಲು ನಿರ್ಧರಿಸಲಾಯಿತು.

ಶುಕ್ರವಾರ ಸುರಿದ ಭಾರೀ ಮಳೆಯಿಂದ ಕರಾಚಿಯ “ನ್ಯಾಶನಲ್‌ ಸ್ಟೇಡಿಯಂ’ ಕೆರೆಯಂತಾಗಿತ್ತು. “ಅಕಾಲಿಕ ಮಳೆಯಿಂದ ಬಹು ನಿರೀಕ್ಷಿತ ಸರಣಿಗೆ ಅಡ್ಡಿಯಾಗಿದೆ. ಹೀಗಾಗಿ ವೇಳಾಪಟ್ಟಿಯನ್ನು ಪರಿಷ್ಕರಿಸಲು ನಿರ್ಧರಿಸಲಾಯಿತು. ಇದಕ್ಕೆ ಒಪ್ಪಿದ ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಕೃತಜ್ಞತೆಗಳು’ ಎಂಬುದಾಗಿ ಪಿಸಿಬಿ ನಿರ್ದೇಶಕ ಝಾಕಿರ್‌ ಖಾನ್‌ ಹೇಳಿದ್ದಾರೆ.
ಮೊದಲ ಪಂದ್ಯಕ್ಕೆ ಹಾಗೂ ರವಿವಾರದ ಪಂದ್ಯಕ್ಕೆಂದು ಖರೀದಿಸಿದ ಟಿಕೆಟ್‌ಗಳನ್ನು 2ನೇ ಅಥವಾ 3ನೇ ಪಂದ್ಯಕ್ಕೂ ಉಪಯೋಗಿಸಬಹುದು ಎಂದು ಪಿಸಿಬಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next