ಇಸ್ಲಮಾಬಾದ್: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮುಂಬರುವ ಅಫ್ಘಾನಿಸ್ತಾನ ಮತ್ತು ಏಷ್ಯಾಕಪ್ ವಿರುದ್ಧದ ಸರಣಿಗಾಗಿ 17 ಸದಸ್ಯರ ತಂಡ ಪ್ರಕಟ ಮಾಡಿದೆ. ಇದರಲ್ಲಿ ಆಲ್‌ರೌಂಡರ್ ಫಹೀಮ್ ಅಶ್ರಫ್ ಮತ್ತೆ ತಂಡ ಸೇರಿದ್ದು ಮಧ್ಯಮ ಕ್ರಮಾಂಕದ ಬ್ಯಾಟರ್ ತಯ್ಯಬ್ ತಾಹಿರ್ ಗೆ ರಾಷ್ಟ್ರೀಯ ತಂಡದ ಚೊಚ್ಚಲ ಕರೆ ಪಡೆದಿದ್ದಾರೆ.
ಫಹೀಮ್ ಕೊನೆಯ ಬಾರಿಗೆ 2021 ರಲ್ಲಿ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರು ಸತತ ಗಾಯಗಳು ಮತ್ತು ಕಳಪೆ ಫಾರ್ಮ್ ಕಾರಣದಿಂದ ತಂಡದಿಂದ ದೂರವಿದ್ದರು.
ತಯ್ಯಬ್ ತಾಹೀರ್ ಅವರು ಅವರು ಇತ್ತೀಚೆಗೆ ಮುಕ್ತಾಯಗೊಂಡ ಎಮರ್ಜಿಂಗ್ ಆಟಗಾರರ ಏಷ್ಯಾ ಕಪ್ ನಲ್ಲಿ ರನ್ ಗಳ ಪೈಕಿ ಒಬ್ಬರಾಗಿದ್ದರು. ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು.
ಇದನ್ನೂ ಓದಿ:Udupi video scandal: ಎಫ್ಎಸ್ಎಲ್ ವರದಿಗೆ ಕಾಯುತ್ತಿದ್ದೇವೆ ಎಂದ ಸಿಐಡಿ ಎಡಿಜಿಪಿ
ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಗೆ ಪಾಕಿಸ್ತಾನ ತಂಡವನ್ನು ಅಂತಿಮಗೊಳಿಸುವ ಗುರಿ ಹೊಂದಿರುವುದರಿಂದ ವೇಗದ ಬೌಲರ್ ಇಹ್ಸಾನುಲ್ಲಾ, ಮಧ್ಯಮ ಕ್ರಮಾಂಕದ ಬ್ಯಾಟರ್ ಹ್ಯಾರಿಸ್ ಸೊಹೈಲ್ ಮತ್ತು ಅಗ್ರ ಕ್ರಮಾಂಕದ ಬ್ಯಾಟರ್ ಶಾನ್ ಮಸೂದ್ ಅವರನ್ನು ಆ ದ್ವಿಪಕ್ಷೀಯ ಸರಣಿಯಿಂದ ಕೈಬಿಡಲಾಗಿದೆ.
ತಂಡ: ಬಾಬರ್ ಅಜಮ್ (ನಾ), ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್, ಇಮಾಮ್-ಉಲ್-ಹಕ್, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಅಬ್ದುಲ್ಲಾ ಶಫೀಕ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಸಲ್ಮಾನ್ ಅಲಿ ಅಘಾ, ಫಹೀಮ್ ಅಶ್ರಫ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ನಸೀಮ್ ಶಾಹ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್