Advertisement

ಕೋರ್ಟ್‌ ಕಲಾಪದ ನಡುವೆ ಭಾರತೀಯ ಅಧಿಕಾರಿಯ ಫೋನ್‌ ಪಾಕ್‌ನಿಂದ ವಶ

03:29 PM May 12, 2017 | udayavani editorial |

ಹೊಸದಿಲ್ಲಿ : ಅತ್ಯಂತ ಪ್ರಚೋದನಕಾರಿ ಕೃತ್ಯವೊಂದರಲ್ಲಿ ಪಾಕ್‌ ನ್ಯಾಯಾಂಗ ಅಧಿಕಾರಿಗಳು ಇಂದು ಶುಕ್ರವಾರ ಭಾರತೀಯ ದೂತಾವಾಸದ ಪ್ರಥಮ ಕಾರ್ಯದರ್ಶಿ ಯವರ ಮೊಬೈಲ್‌ ಫೋನ್‌ ಅನ್ನು ವಶಪಡಿಸಿಕೊಂಡರು. 

Advertisement

ಭಾರತೀಯ ದೂತಾವಾಸದ ಪ್ರಥಮ ಕಾರ್ಯದರ್ಶಿ ಯವರು ಇಸ್ಲಾಮಾಬಾದ್‌ ಹೈಕೋರ್ಟ್‌ ಕಲಾಪದಲ್ಲಿ ಭಾಗಿಯಾಗಿದ್ದರು. ಪಾಕಿಸ್ಥಾನಕ್ಕೆ ಬಂದು ಮದುವೆಯಾಗಲಿದ್ದ ಭಾರತೀಯ ಮಹಿಳೆಯೋರ್ವರು ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈಕಮಿಶನ್‌ನಲ್ಲಿ ಆಸರೆ ಕೋರಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. 

ತಾನು ವಿವಾಹವಾಗಿದ್ದ ಪಾಕಿಸ್ಥಾನದ ಖೈಬರ್‌ ಫ‌ಕ್‌ತೂನ್‌ಖ್ವಾ  ಪ್ರಾಂತ್ಯದ ನಿವಾಸಿ ತಾಹಿರ್‌ ಅಲಿ ಎಂಬಾತನು ಈ ಮೊದಲೇ ಮದುವೆಯಾಗಿ ನಾಲ್ಕು ಮಕ್ಕಳ ತಂದೆಯಾಗಿರುವ ವಿಷಯ ತನಗೆ ಇಲ್ಲಿಗೆ ಬಂದ ಬಳಿಕವೇ ಗೊತ್ತಾಗಿರುವುದರಿಂದ ತನಗೆ ಮರಳಿ ಭಾರತಕ್ಕೆ ಹೋಗುವುದಕ್ಕೆ ಅವಕಾಶ ನೀಡುವಂತೆ 20ರ ಹರೆಯದ ಉಝ್ಮಾ ನ್ಯಾಯಾಲಯವನ್ನು ಕೋರಿದ್ದಳು. ಅದಕ್ಕಾಗಿ ತನಗೆ ಭಾರತೀಯ ದೂತಾವಾಸದಲ್ಲಿ ಆಶ್ರಯ ಪಡೆಯುವುದಕ್ಕೆ ಅವಕಾಶ ನೀಡುವಂತೆಯೂ ಆಕೆ ಕೋರಿದ್ದಳು.

ಹೆಚ್ಚಿನ ವಿವರಗಳನ್ನು ಎದುರು ನೋಡಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next