Advertisement

ಭಾರತದಲ್ಲಿ ರಕ್ತಪಾತಕ್ಕೆ ಪಾಕ್‌ ಸಂಚು

11:09 AM Sep 24, 2018 | Karthik A |

ಹೊಸದಿಲ್ಲಿ: ಪಾಕಿಸ್ಥಾನವು ಕಾಶ್ಮೀರದ ಯುವಕರನ್ನು ಉಗ್ರವಾದಕ್ಕೆ ಸೆಳೆಯುತ್ತಿದೆ. ಕಾಶ್ಮೀರದಲ್ಲಿ ಹಿಂಸೆ ನಡೆಯುತ್ತಲೇಇರಬೇಕು ಹಾಗೂ ಭಾರತದಲ್ಲಿ ರಕ್ತಪಾತ ನಡೆಸಬೇಕು ಎಂಬುದು ಪಾಕ್‌ ಉದ್ದೇಶ ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹೇಳಿದ್ದಾರೆ. 

Advertisement

ಕಾಶ್ಮೀರದಲ್ಲಿ ಪೊಲೀಸರ ಹತ್ಯೆ ಹಾಗೂ ಉಗ್ರ ಬುರ್ಹಾನ್‌ ವಾನಿಯ ಅಂಚೆ ಚೀಟಿಯನ್ನು ಪಾಕಿಸ್ಥಾನ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಮಾತುಕತೆಯನ್ನು ಭಾರತ‌ ರದ್ದು ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ರಾವತ್‌, ಪಾಕ್‌ ಅಧ್ಯಕ್ಷ ಇಮ್ರಾನ್‌ ಖಾನ್‌ ಅಧಿಕಾರಕ್ಕೆ ಬಂದಾಗ ಶಾಂತಿ ಸಂದೇಶಗಳನ್ನು ಕಳುಹಿಸಲು ಪ್ರಯತ್ನಿಸಿದರು. ಆದರೆ ಪಾಕಿಸ್ಥಾನದ ಇಡೀ ವ್ಯವಸ್ಥೆಗೆ ಶಾಂತಿ ಬೇಕಿತ್ತೇ ಎಂಬುದನ್ನು ನಾವು ತಿಳಿಯಬೇಕಿದೆ ಎಂದಿದ್ದಾರೆ. ಏತನ್ಮಧ್ಯೆ, ರವಿವಾರ ಜಮ್ಮು-ಕಾಶ್ಮೀರದ ಪುಲ್ವಾಮಾ  ಜಿಲ್ಲೆ ಯಲ್ಲಿ ಪಾಕಿಸ್ತಾ ನ ಮೂಲದ ಜೈಶ್‌ ಉಗ್ರನೊಬ್ಬನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next