ಇಸ್ಲಾಮಾಬಾದ್: ಅಲ್‌ಖೈದಾ ಉಗ್ರ ಒಸಾಮ ಬಿನ್ ಲಾಡೆನ್‌ನನ್ನು ಶಾಹೀದ್ (ಹುತಾತ್ಮ) ಎಂದು ಪ್ರಧಾನಿ ಇಮ್ರಾನ್ ಖಾನ್ ಕರೆದಿರುವುದಕ್ಕೆ ಪಾಕಿಸ್ಥಾನದಲ್ಲೇ ವಿರೋಧ ವ್ಯಕ್ತವಾಗಿದೆ.
ಇಮ್ರಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕ, ಮಾಜಿ ವಿದೇಶಾಂಗ ಸಚಿವ ಖವಾಜಾ ಅಸೀಫ್, ‘ಒಸಾಮ ಬಿನ್ ಲಾಡೆನ್ ಒಬ್ಬ ಉಗ್ರ.
ಈತ ನಮ್ಮ ನೆಲದಲ್ಲಿ ಭಯೋತ್ಪಾದನೆಯನ್ನು ತಂದು ಪಾಕಿಸ್ಥಾನವನ್ನು ಹಾಳು ಮಾಡಿದ್ದಾನೆ. ಆದರೆ, ಈತನನ್ನು ಪ್ರಧಾನಿ ಇಮ್ರಾನ್ ಖಾನ್ ಹುತಾತ್ಮ ಎಂದು ಕರೆಯುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕಿಸ್ಥಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ವಕ್ತಾರ ಮುಸ್ತಾಫ ನವಾಜ್ ಖೋಖರ್ ಸೇರಿದಂತೆ ಮತ್ತಿತರರು ಇಮ್ರಾನ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಗುರುವಾರ ನಡೆದ ಸಂಸತ್ ಅಧಿವೇಶನದಲ್ಲಿ ‘ಒಸಾಮ ಬಿನ್ ಲಾಡೆನ್‌ನನ್ನು ಶಾಹೀದ್ (ಹುತಾತ್ಮ) ಎಂದು ಪ್ರಧಾನಿ ಇಮ್ರಾನ್ ಖಾನ್ ಬಣ್ಣಿಸಿದ್ದರು.
ನಮಗೆ ಗೊತ್ತಿಲ್ಲದೇ ಅಮೆರಿಕ ಸೇನಾ ಪಡೆಗಳು ಅಬೋಟಾಬಾದ್‌ಗೆ ಧಾವಿಸಿ, ಲಾಡೆನ್‌ನನ್ನು ಮುಗಿಸಿದವು. ಆ ವೇಳೆ ನಾವು ಸಾಕಷ್ಟು ಅಪಮಾನಕ್ಕೀಡಾದೆವು ಎಂದು ತಿಳಿಸಿದ್ದರು.