ಇಸ್ಲಾಮಾಬಾದ್: ಗಡಿಯಾಚೆಗಿನ ಭಯೋತ್ಪಾದನೆಗೆ ತಮ್ಮ ಬೆಂಬಲದ ಕುರಿತ ಕಳವಳಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಮಾತುಕತೆ ಸ್ಥಗಿತಗೊಂಡಿರುವುದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್)ದ ಸಿದ್ಧಾಂತವೇ ಕಾರಣವಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ದೂಷಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮದ್ಯ ಸೇವಿಸಿ ನಿದ್ದೆಗೆ ಶರಣಾದ ಸಹಾಯಕ ಸ್ಟೇಷನ್ ಮಾಸ್ಟರ್! ರೈಲು ಸಂಚಾರ ಅಸ್ತವ್ಯಸ್ತ
ಒಂದು ವೇಳೆ ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಸಾಧ್ಯವಾಗಬಹುದೇ ಎಂಬ ಪ್ರಶ್ನೆಗೆ ಪ್ರಧಾನಿ ಖಾನ್ ಎಎನ್ ಐ ಜತೆ ಮಾತನಾಡುತ್ತ, ನಾವು ನಾಗರಿಕ ನೆರೆಹೊರೆಯವರಂತೆ ಬದುಕಲು ಬಹಳ ದೀರ್ಘ ಕಾಲದಿಂದ ಕಾಯುತ್ತಿದ್ದೇವೆ ಎಂದು ನಾನು ಭಾರತಕ್ಕೆ ಹೇಳಬಲ್ಲೆ, ಆದರೆ ನಾವು ಏನು ಮಾಡಬಹುದು? ನಮ್ಮ ಮಾತುಕತೆಗೆ ಆರ್ ಎಸ್ ಎಸ್ ಸಿದ್ಧಾಂತ ತಡೆಯೊಡ್ಡುತ್ತಿದೆ ಎಂದು ಆರೋಪಿಸಿರುವುದಾಗಿ ವರದಿ ವಿವರಿಸಿದೆ.
ಏತನ್ಮಧ್ಯೆ ಆರ್ ಎಸ್ ಎಸ್ ಮುಖಂಡ ಇಂದ್ರೇಶ್ ಕುಮಾರ್, ಇಮ್ರಾನ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದ್ದು, ಪಾಕಿಸ್ತಾನ ನಾಯಕತ್ವದ ವಿಷಕಾರಿ ಸಿದ್ಧಾಂತದಿಂದಾಗಿ 1947ರಲ್ಲಿ ದೇಶ ವಿಭಜನೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ನೆರೆಯ ದೇಶದ ನಾಯಕತ್ವ ವಿಷಕಾರಿ ಸ್ವಭಾವ ಹೊಂದಿದೆ ಮತ್ತು ಈ ದೇಶ ಕೂಡಾ ವಿಷಕಾರಿ ಮತ್ತು ರಕ್ತಸಿಕ್ತ ಸಂದರ್ಭದಲ್ಲಿ ಜನ್ಮತಳೆದಿದೆ ಎಂದು ಇಂದ್ರೇಶ್ ಕುಮಾರ್ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.