Advertisement
59 ವರ್ಷ ಪ್ರಾಯದ ತಹವ್ವೂರ್ ರಾಣಾ ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ. ಮುಂಬಯಿ ದಾಳಿಯ ಪ್ರಮುಖ ಸಂಚುಕೋರರಲ್ಲೊಬ್ಬನಾಗಿರುವ ಡೇವಿಡ್ ಹೆಡ್ಲಿಗೆ ಈತ ಪರಮಾಪ್ತನಾಗಿದ್ದಾನೆ.
Related Articles
Advertisement
ಮುಂಬಯಿ ದಾಳಿಗೆ ಸಂಬಂಧಿಸಿದ ಸೂತ್ರದಾರರಲ್ಲಿ ಒಬ್ಬನಾಗಿರುವ ರಾಣಾ ಜೂನ್ 10ರಂದು ಬಂಧನವಾಗಿರುವ ಮಾಹಿತಿ ತಮಗೆ ಲಭಿಸಿದೆ ಎಂದು ಭಾರತೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹಾಗೂ, ಭಯೋತ್ಪಾದನಾ ಚಟುವಟಿಕೆಗಳ ಆರೋಪದ ಮೇಲೆ ಈತನ ಗಡೀಪಾರು ಸಂಬಂಧ ಭಾರತದ ಮನವಿ ಇರುವುದನ್ನು ಲಾಸ್ ಏಂಜಲೀಸ್ ನಲ್ಲಿರುವ ಜಿಲ್ಲಾ ನ್ಯಾಯಾಧೀಶರಿಗೆ ಯು.ಎಸ್. ಅಟಾರ್ನಿ ಅವರು ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿಯನ್ನು ಈ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಇರುವ ಅಧಿಕಾರಿಯೊಬ್ಬರು ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ್ದಾರೆ.
ಮುಂಬಯಿ ದಾಳಿ ಸಂಚಿನ ವಿಚಾರಕ್ಕೆ ಸಂಬಂಧಿಸಿದಂತೆ 11 ವರ್ಷಗಳ ಬಳಿಕ ಇದೊಂದು ಧನಾತ್ಮಕ ಬೆಳವಣಿಗೆಯಾಗಿದೆ. ಮತ್ತು ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡುವ ನಿಟ್ಟಿನಲ್ಲಿ ಇನ್ನು ಅಲ್ಲಿ ವಿಚಾರಣೆ ಪ್ರಾರಂಭಗೊಳ್ಳಲಿದೆ ಎಂದು ರಾಷ್ಟ್ರೀಯ ತನಿಖಾ ದಳದ ಹೆಸರು ಹೇಳಲಿಚ್ಚಿಸದ ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡೇವಿಡ್ ಹೆಡ್ಲಿ ಮುಂಬಯಿ ದಾಳಿಗೂ ಮುಂಚೆ ಇಲ್ಲಿ ಸಂಚು ರೂಪಿಸುವ ವಿಚಾರದಲ್ಲಿ ಆತನಿಗೆ ಸೂಕ್ತ ದಾಖಲೆಗಳನ್ನು ತಯಾರಿಸಿಕೊಡುವ ವಿಚಾರದಲ್ಲಿ ರಾಣಾ ನ ಸಂಸ್ಥೆ ನೆರವಾಗಿರುವ ವಿಚಾರದಲ್ಲಿ ಭಾರತ ಈತನ ಮೇಲೆ ಫೋರ್ಜರಿ ಮತ್ತು ನಂಬಿಕೆ ದ್ರೋಹದ ಆರೋಪಗಳನ್ನು ಹೊರಿಸಿ ಈತನನ್ನು ಗಡೀಪಾರು ಮಾಡುವಂತೆ ಅಮೆರಿಕಾಗೆ ಮನವಿ ಸಲ್ಲಿಸಲಾಗಿದೆ ಮತ್ತು ಭಾರತದ ಈ ಆರೋಪವನ್ನು ಮಾನ್ಯ ಮಾಡಿರುವ ಎಫ್.ಬಿ.ಐ. ಈತನ ವಿರುದ್ಧದ ಗಡೀಪಾರು ವಿಚಾರಣಾ ಪ್ರಕ್ರಿಯೆಗೆ ಚಾಲನೆ ನೀಡಲಿದೆ.