Advertisement

ಪುಲ್ವಾಮಾ ಕ್ರಿಕೆಟ್‌ ಪಂದ್ಯದಲ್ಲಿ ಪಿಓಕೆ ರಾಷ್ಟ್ರಗೀತೆ:ವಿಡಿಯೋ ವೈರಲ್

12:13 PM May 22, 2017 | udayavani editorial |

ಶ್ರೀನಗರ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಮೊನ್ನೆ ಶನಿವಾರ ನಡೆದಿದ್ದ  ಸ್ಥಳೀಯ ಕ್ರಿಕೆಟ್‌ ಪಂದ್ಯವೊಂದರ ವೇಳೆ ಪಾಕ್‌ ಆಕ್ರಮಿ ಕಾಶ್ಮೀರದ (ಪಿಓಕೆ) ರಾಷ್ಟ್ರಗೀತೆಯನ್ನು ನುಡಿಸಲಾದ ಪ್ರಚೋದನಾತ್ಮಕ ಘಟನೆ ವರದಿಯಾಗಿದೆ.  ಈ ಕುರಿತ ವಿಡಿಯೋ ಚಿತ್ರಿಕೆಯೊಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

Advertisement

ಪುಲ್ವಾಮಾ ಹಂಟರ್‌ಸ್‌ ಮತ್ತು ಪ್ಯಾಂಪೋರಾ ಇಲೆವೆನ್‌ ಎಂಬ ಎರಡು ಸ್ಥಳೀಯ ಕ್ರಿಕೆಟ್‌ ಪಂದ್ಯಗಳ ನಡುವೆ ಮೊನ್ನೆ ಶನಿವಾರ ಪಂದ್ಯವೊಂದು ನಡೆದಿದ್ದಾಗ ಪಿಓಕೆ ರಾಷ್ಟ್ರಗೀತೆಯನ್ನು ನುಡಿಸಲಾಯಿತು. 

ಪಂದ್ಯದ ವೇಳೆ ದರ್ಶಕರಲ್ಲಿ ಕೆಲವರು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದುದು ಕೂಡ ಕೇಳಿ ಬಂದಿತ್ತು. ಪೊಲೀಸರು ಈ ಬಗ್ಗೆ ಇನ್ನಷ್ಟೇ ತನಿಖೆ, ಕ್ರಮ ನಡೆಸಬೇಕಾಗಿದೆ. 

ಕಳೆದ ತಿಂಗಳಲ್ಲಿ ಕಾಶ್ಮೀರದ ಸ್ಥಳೀಯ ಕ್ರಿಕೆಟ್‌ ಕ್ಲಬ್‌ ಒಂದರ ಆಟಗಾರರು ಪಾಕ್‌ ಕ್ರಿಕೆಟ್‌ ತಂಡದ ಸದಸ್ಯರು ತೊಡುವ ರೀತಿಯ ಸಮವಸ್ತ್ರವನ್ನು ಧರಿಸಿಕೊಂಡು ಪಂದ್ಯವನ್ನು ಆಡಿದ್ದುದರ ವಿಡಿಯೋ ಭಾರೀ ವೈರಲ್‌ ಆಗಿತ್ತು. ಹಾಗೆ ಪಾಕ್‌ ಕ್ರಿಕೆಟ್‌ ಸಮವಸ್ತ್ರ ಧರಿಸಿದ್ದ ಆಟಗಾರರು ಪಂದ್ಯಾರಂಭಕ್ಕೆ ಮೊದಲು ಪಾಕ್‌ ರಾಷ್ಟ್ರ ಗೀತೆಯನ್ನು ಕೂಡ ಹಾಡಿ ವಿವಾದ ಸೃಷ್ಟಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next