Advertisement
ಕೆಲ ದಿನಗಳ ಹಿಂದೆ ಜಾಧವ್ ಅವರ ಗಲ್ಲು ಶಿಕ್ಷೆಗೆ ತಡೆ ನೀಡಿದ್ದ ಅಂತಾರಾಷ್ಟ್ರೀಯ ನ್ಯಾಯಾಲಯ, ಸೋಮವಾರ ಮಧ್ಯಾಹ್ನ ಪ್ರಕರಣದ ವಿಚಾರಣೆ ಆರಂಭಿಸಿತು. ರೋನಿ ಅಬ್ರಾಹಾಂ ನೇತೃತ್ವದ 16 ನ್ಯಾಯಮೂರ್ತಿಗಳ ಪೀಠದ ಮುಂದೆ ವಾದ ಮಾಡಲು ಭಾರತ ಮತ್ತು ಪಾಕಿಸ್ತಾನಕ್ಕೆ ತಲಾ 90 ನಿಮಿಷಗಳ ಸಮಯ ನೀಡಲಾಗಿತ್ತು. ಅಲ್ಲದೆ ವಿಚಾರಣೆ ಶುರುವಾಗುವ ಮುನ್ನವೇ ಪಾಕಿಸ್ತಾನ ಕುಲಭೂಷಣ್ ಜಾಧವ್ ಅವರ ತಪ್ಪೊಪ್ಪಿಗೆ ವಿಡಿಯೋ ನೋಡಬೇಕು ಎಂದು ಮನವಿ ಮಾಡಿತು. ಇದಕ್ಕೆ ವಿರೋಧಿಸಿದ ಭಾರತ, ಅದೊಂದು ತಿರುಚಲಾದ ವಿಡಿಯೋ ಎಂದು ಹೇಳಿತು. ಭಾರತದ ವಾದ ಮನ್ನಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ ವಿಡಿಯೋ ನೋಡಲ್ಲ ಎಂದು ಖಂಡತುಂಡವಾಗಿ ಹೇಳಿತು.
ಮೊದಲಿಗೆ ವಾದ ಮಂಡಿಸಿದ ಭಾರತದ ವಕೀಲ ಹರೀಶ್ ಸಾಳ್ವೆ ಅವರು, ತುರ್ತಾಗಿ ಕುಲಭೂಷಣ್ ಜಾಧವ್‌ಗೆ ವಿಧಿಸಲಾಗಿರುವ ಗಲ್ಲುಶಿಕ್ಷೆಯನ್ನು ಅಮಾನತು ಮಾಡಬೇಕು. ಇಲ್ಲಿ ವಿಚಾರಣೆ ನಡೆಯುವ ಸಂದರ್ಭದÇÉೇ ಪಾಕಿಸ್ತಾನ ಅವರನ್ನು ಗಲ್ಲಿಗೇರಿಸುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದರು. ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದ್ದು, ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿದೆ. ಹೀಗಾಗಿ, ನಾವು ತತ್‌ಕ್ಷಣಕ್ಕೆ ಅರ್ಜಿ ಸಲ್ಲಿಸಿದೆವು ಎಂದು ತುರ್ತಾಗಿ ಅರ್ಜಿ ಸಲ್ಲಿಸಿದ ಕಾರಣವನ್ನು ವಿವರಿಸಿದರು. ವಿಯೆನ್ನಾ ಒಪ್ಪಂದವನ್ನು ಉಲ್ಲಂ ಸಿರುವ ಪಾಕಿಸ್ತಾನದ ಕ್ರಮದ ಬಗ್ಗೆ ಪ್ರಸ್ತಾಪಿಸಿದ ಸಾಳ್ವೆ ಅವರು, ಜಾಧವ್‌ಗೆ ಕಾನೂನಿನ ನೆರವು ನೀಡುವ ಸಲುವಾಗಿ ಭಾರತ 16 ಬಾರಿ ಸಂಪರ್ಕಿಸಿದರೂ ಪಾಕಿಸ್ತಾನ ಉತ್ತರ ನೀಡಲೇ ಇಲ್ಲ ಎಂದರು. ಒಂದು ರೀತಿ ಪಾಕಿಸ್ತಾನ ಕಿವುಡನಂತೆ ವರ್ತಿಸಿತು ಎಂದು ಹೇಳಿದರು. ಇದಷ್ಟೇ ಅಲ್ಲ, ಪಾಕಿಸ್ತಾನ ಮಿಲಿಟರಿ ಕೋರ್ಟ್ ಕೂಡ ಒಂದೇ ಕಡೆಯ ವಾದ ಆಲಿಸಿ ತೀರ್ಪು ನೀಡಿದೆ. ಇದು ಅನ್ಯಾಯದ ವಿಚಾರಣೆ. ನಾವು ವಕೀಲರನ್ನು ಕಳುಹಿಸುತ್ತೇವೆ ಎಂದರೂ ಅವಕಾಶ ಕೊಡಲಿಲ್ಲ ಎನ್ನುವ ಮೂಲಕ ಸಾಳ್ವೆ ಅವರು ಪಾಕಿಸ್ತಾನದ ಅಕ್ರಮವನ್ನು ಪಾಯಿಂಟ… ಟು ಪಾಯಿಂಟ… ಬಯಲಿಗೆಳೆದರು.
Related Articles
1971ರಿಂದ ಈಚೆಗೆ ನಾವು ಯಾವುದೇ ಪ್ರಕರಣವನ್ನು ಮುಂದಿಟ್ಟುಕೊಂಡು ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿಲ್ಲ. ಆದರೆ ಈಗ ಒಬ್ಬ ನಿರಪರಾಧಿಯನ್ನು ಉಳಿಸುವ ಸಲುವಾಗಿ ಕೋರ್ಟ್ ಮುಂದೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು ಎಂದು ವಕೀಲರು ಹೇಳಿದರು. ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ಮಾನವ ಹಕ್ಕುಗಳನ್ನು ಕಿಟಕಿಯಿಂದ ಆಚೆಗೆ ತೂರಿದೆ. ಕಳೆದ ವರ್ಷವೇ ಬಂಧಿಸಿ, ಜಾಧವ್‌ರನ್ನು ಸೇನಾ ವಶಕ್ಕೆ ಒಪ್ಪಿಸಿ ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ. ಇಂಥ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಾಳ್ವೆ ಅವರು ನ್ಯಾಯಪೀಠದ ಮುಂದೆ ಸಮರ್ಥವಾಗಿ ವಾದ ಮಂಡಿಸಿದರು.
ಇದಷ್ಟೇ ಅಲ್ಲ, ವಕೀಲರ ಭೇಟಿಗೆ ಅವಕಾಶ ನೀಡದ ಪಾಕಿಸ್ತಾನ, ಈಗ ಜಾಧವ್ ಅವರನ್ನು ಯಾವುದೇ ಕ್ಷಣದಲ್ಲಿ ಬೇಕಾದರೂ ಗಲ್ಲಿಗೇರಿಸಬಹುದು. ಗಲ್ಲಿಗೇರಿಸಿದ್ದೇ ಆದರೆ ಅದು ಯುದ್ಧಾಪರಾಧವಾಗುತ್ತದೆ. ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದರು. ಜತೆಗೆ, ಜಾಧವ್ ಅವರ ವಿರುದ್ಧದ ಆರೋಪಪಟ್ಟಿಯನ್ನೂ ಪಾಕಿಸ್ತಾನ ಭಾರತಕ್ಕೆ ಕೊಟ್ಟಿಲ್ಲ ಎಂಬುದನ್ನು ಸಾಳ್ವೆ ಕೋರ್ಟ್ ಗಮನಕ್ಕೆ ತಂದರು. ಇರಾನ್‌ನಲ್ಲಿದ್ದ ಜಾಧವ್‌ರನ್ನು ಅಕ್ರಮವಾಗಿ ಅಪಹರಣ ಮಾಡಿಕೊಂಡು ಪಾಕಿಸ್ತಾನಕ್ಕೆ ತರಲಾಗಿದೆ ಎಂದರು.
Advertisement
ಜರ್ಮನಿ, ಮೆಕ್ಸಿಕೋ ಮತ್ತು ನಿಕಾರಾಗುವಾ ದೇಶಗಳು ತಮ್ಮ ದೇಶದ ಪ್ರಜೆಗಳನ್ನು ರಕ್ಷಿಸಿಕೊಳ್ಳಲು ಅಂತಾರಾಷ್ಟ್ರೀಯ ಕೋರ್ಟ್ ಮುಂದೆ ಬಂದದ್ದು, ಹಾಗೆಯೇ ಕೋರ್ಟ್ ಇವುಗಳಿಗೆ ಪೂರಕವಾಗಿ ಸ್ಪಂದಿಸಿರುವ ಪ್ರಕರಣಗಳನ್ನು ಸಾಳ್ವೆ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಪಾಕಿಸ್ತಾನದ ನೀರಸ ವಾದ:ರಾಜಕಾರಣಿಗಳ ಆರೋಪ- ಪ್ರತ್ಯಾರೋಪದಂತೆ ಈ ವಾದವನ್ನು ಪರಿಗಣಿಸಿದ ಪಾಕಿಸ್ತಾನ, ಪೇಲವವಾಗಿ ತನ್ನ ವಾದ ಮುಂದಿಟ್ಟಿತು. ಅದರ ವಾದ ನಿಂತಿದ್ದು ಒಂದು ವಾಕ್ಯದಲ್ಲೇ. ನಾವು ಕುಲಭೂಷಣ್ ಜಾಧವ್ ಅವರ ಪಾಸ್‌ಪೋರ್ಟ್‌ನಲ್ಲಿ ಮುಸ್ಲಿಂ ಹೆಸರು ಏಕಿದೆ ಎಂಬ ಕುರಿತು ಭಾರತದಿಂದ ವಿವರಣೆ ಕೇಳಿದ್ದೆವು. ಆದರೆ ಭಾರತ ಇದಕ್ಕೆ ವಿವರಣೆ ನೀಡಲೇ ಇಲ್ಲ. ಹೀಗಾಗಿ ನಾವು ಜಾಧವ್‌ಗೆ ವಕೀಲರ ಸಹಕಾರ ನೀಡಲಿಲ್ಲ ಎಂದಿತು. ಪಾಕಿಸ್ತಾನದ ಪರ ಅಲ್ಲಿನ ಅಟಾರ್ನಿ ಜನರಲ… ಖರ್ವಾ ಖುರೇಷಿ ನೇತೃತ್ವದಲ್ಲಿ ವಾದ ಮಂಡನೆ ನಡೆಯಿತು. ಭಾರತದ ವಕೀಲ ಸಾಳ್ವೆ ಅವರು ಎತ್ತಿದ್ದ ವಿಷಯಗಳಿಗೆ ಪ್ರತ್ಯುತ್ತರ ನೀಡುವುದಕ್ಕಿಂತ ಹೆಚ್ಚಾಗಿ, ಪಾಕಿಸ್ತಾನ ಭಾರತವನ್ನು ತೆಗಳುವುದಕ್ಕಾಗಿಯೇ ಕೋರ್ಟ್ ಕೊಠಡಿಯನ್ನು ಬಳಸಿಕೊಂಡಿತು. ಭಾರತ ರಾಜಕೀಯ ಕಾರಣಕ್ಕಾಗಿ ಈ ಕೇಸನ್ನು ಇಲ್ಲಿವರೆಗೆ ತಂದಿದೆ ಎಂಬುದು ಅದರ ಪ್ರಮುಖ ಆರೋಪ. ಅಲ್ಲದೆ ಜಾಧವ್‌ರನ್ನು ಇರಾನ್‌ನಲ್ಲಿ ಅಪಹರಿಸಲಾಗಿದೆ ಎಂದು ಭಾರತ ಹೇಳುತ್ತಿದೆ. ಇದು ಸುಳ್ಳು. ನಾವು ಅವರನ್ನು ಬಲೂಚಿಸ್ತಾನದಲ್ಲಿ ಬಂಧಿಸಿದ್ದೇವೆ. ಭಾರತ ಜಾಧವ್‌ರನ್ನು ಪಾಕಿಸ್ತಾನದಲ್ಲಿ ಹಿಂಸಾಚಾರ ನಡೆಸುವುದಕ್ಕಾಗಿಯೇ ಕಳುಹಿಸಿದೆ ಎಂದು ಖುರೇಷಿ ಹೇಳಿದರು. ಜಾಧವ್ ತಪ್ಪೊಪ್ಪಿಗೆ ಹೇಳಿಕೆಯನ್ನು ಸ್ವಯಂ ಪ್ರೇರಿತರಾಗಿ ನೀಡಿ¨ªಾರೆ. ಜತೆಗೆ ಅವರದ್ದು ಗೂಢಾಚಾರಿಕೆ ಪ್ರಕರಣವಾದ್ದರಿಂದ ವಕೀಲರ ಸಹಕಾರ ನೀಡಲು ಸಾಧ್ಯವಿಲ್ಲ. ಅಲ್ಲದೆ ತತ್‌ಕ್ಷಣಕ್ಕೆ ಜಾಧವ್‌ರನ್ನು ಗಲ್ಲಿಗೇರಿಸುವುದಿಲ್ಲ. ಕ್ಷಮಾದಾನಕ್ಕಾಗಿ 90 ದಿನಗಳ ಸಮಯ ನೀಡಿದ್ದೇವೆ. ಅವರು ಎರಡು ಸ್ಟಾರ್‌ಗಳ ಮಾನ್ಯತೆಯುಳ್ಳ ಮಿಲಿಟರಿ ಅಧಿಕಾರಿಗಳ ಬಳಿ ಕ್ಷಮಾದಾನ ಕೇಳಬಹುದು ಎಂದರು. ಜತೆಗೆ, ಇವರನ್ನು ಕಾಂಗರೂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ಭಾರತದ ಅರ್ಜಿಗೆ ಪಾಕ್ ಕಿಡಿ:
1999ರಲ್ಲಿ ಭಾರತ, ಪಾಕಿಸ್ತಾನದ ಯುದ್ಧ ವಿಮಾನ ಹೊಡೆದುರುಳಿಸಿದಾಗ ಅಂತಾರಾಷ್ಟ್ರೀಯ ನ್ಯಾಯಾಲಯದ ವ್ಯಾಪ್ತಿಗೆ ನಾವು ಬರಲ್ಲ ಎಂದು ವಾದಿಸಿ ಅದರಲ್ಲಿ ಗೆದ್ದಿತ್ತು. ಇದಕ್ಕೆ ಕಾಮನ್‌ವೆಲ್ತ್ ದೇಶಗಳು ನ್ಯಾಯಾಲಯದ ಹೊರಗಿವೆ ಎಂದು ವಾದಿಸಿತ್ತು. ಆದರೆ ಈಗ ರಾಜಕೀಯ ಕಾರಣಕ್ಕಾಗಿ ಭಾರತ ಇಲ್ಲಿವರೆಗೆ ಬಂದಿದೆ. ಆಗ ಅಂತಾರಾಷ್ಟ್ರೀಯ ನ್ಯಾಯಾಲಯದ ವ್ಯಾಪಿಗೆ ಬರದ ಭಾರತ, ಈಗ ಅದು ಹೇಗೆ ಅರ್ಜಿ ಸಲ್ಲಿಸಿತು ಎಂದು ಖುರೇಷಿ ಪ್ರಶ್ನಿಸಿದರು. ಜತೆಗೆ ಈ ಪ್ರಕರಣ ಪಾಕಿಸ್ತಾನದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾದ್ದರಿಂದ ಅಂತಾರಾಷ್ಟ್ರೀಯ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದಿತು. ಅರ್ಜಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಕೋರಿತು. ಇದಷ್ಟೇ ಅಲ್ಲ, ಕಳೆದ ವಾರ ಕೋರ್ಟ್ ಪಾಕಿಸ್ತಾನಕ್ಕೆ ಬರೆದಿದ್ದ ಪತ್ರವನ್ನೇ ಭಾರತ ಗಲ್ಲು ಶಿಕ್ಷೆಗೆ ತಡೆ ಎಂದು ಬಿಂಬಿಸಿತು. ಅಲ್ಲದೆ ಮಾಧ್ಯಮಗಳ ಮೂಲಕ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ನೋಡಿತು ಎಂಬ ಆರೋಪವನ್ನೂ ಖುರೇಷಿ ಮಾಡಿದರು.ಎರಡೂ ಕಡೆಯ ವಾದ -ಪ್ರತಿವಾದ ಆಲಿಸಿದ 16 ನ್ಯಾಯಮೂರ್ತಿಗಳ ಪೀಠ, ಅತೀ ಶೀಘ್ರದಲ್ಲಿ ತೀರ್ಪು ಪ್ರಕಟಿಸುವುದಾಗಿ ಹೇಳಿತು. ಆದರೆ ನಿಖರ ದಿನಾಂಕ ಪ್ರಕಟಿಸಲಿಲ್ಲ. ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಪಾಕ್ ಸೇರಿದ್ದು 2017ರಲ್ಲಿ!
ವಿಶೇಷವೆಂದರೆ ಪಾಕಿಸ್ತಾನ ಇದುವರೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿರಲಿಲ್ಲ. ಅದು 2017ರ ಮಾರ್ಚ್ 29ರಂದು ಇದರ ವ್ಯಾಪ್ತಿಗೆ ಸೇರಿದೆ. ಅಲ್ಲದೆ ಸೋಮವಾರದ ವಿಚಾರಣೆಯನ್ನು ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಸೇರುವಾಗ ಮಾಡಿಕೊಂಡಿರುವ ಒಪ್ಪಂದ ಪತ್ರದಲ್ಲಿಯೇ ಹೇಳಿಕೊಂಡಿದೆ. ಜತೆಗೆ ದೇಶದ ಹಿತಾಸಕ್ತಿಗೆ ಧಕ್ಕೆಯಾಗುವಂಥ ಪ್ರಕರಣಗಳಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಮಧ್ಯ ಪ್ರವೇಶಿಸಬಾರದು ಎಂದು ಕೇಳಿಕೊಂಡಿದೆ.