Advertisement

ಪಾಕ್‌ ಭಯೋತ್ಪಾದನ ಕಾರ್ಖಾನೆ ಮುಚ್ಚಬೇಕು: ಜೈಶಂಕರ್‌ 

03:21 PM Feb 14, 2017 | udayavani editorial |

ಮುಂಬಯಿ : ಪಾಕಿಸ್ಥಾನ ತನ್ನಲ್ಲಿನ ಭಯೋತ್ಪಾದನ ಕಾರ್ಖಾನೆಯನ್ನು ಮುಚ್ಚಬೇಕು; ಪಾಕ್‌ ಭಯೋತ್ಪಾದನ ಕಾರ್ಖಾನೆಯ ಬಗ್ಗೆ ಈಗ ಅಂತಾರಾಷ್ಟ್ರೀಯ ಕಳವಳವೇ ವ್ಯಕ್ತವಾಗುತ್ತಿದೆ ಎಂದು ಭಾರತದ ವಿದೇಶ ಕಾರ್ಯದರ್ಶಿ ಎಸ್‌ ಜೈಶಂಕರ್‌ ಹೇಳಿದ್ದಾರೆ.

Advertisement

“ಭಾರತ ಸಾರ್ಕ್‌ ಅನ್ನು ಪೂರ್ತಿಯಾಗಿ ಕೈಬಿಟ್ಟಿಲ್ಲ; ಆದರೆ ಅದೇ ರೀತಿಯ ಪ್ರಾದೇಶಿಕ ಏಕತೆ, ಸಮಗ್ರತೆಯ ಅವಕಾಶಗಳನ್ನು ಶೋಧಿಸುತ್ತಿದೆ’ ಎಂದು ಜೈಶಂಕರ್‌ ಹೇಳಿದರು. 

ಚೀನದೊಂದಿಗಿನ ಬಾಂಧವ್ಯದ ಕುರಿತಾಗಿ ಮಾತನಾಡಿದ ಜೈಶಂಕರ್‌, “ಸಮಸ್ಯೆಗಳಿಗೆ ಹೆದರಿಕೊಂಡಿರುವುದರಿಂದ ಯಾವುದೇ ಪ್ರಯೋಜನವಿಲ್ಲ; ಉಭಯ ದೇಶಗಳೊಳಗಿನ ಬಾಂಧವ್ಯವನ್ನು ಇನ್ನಷ್ಟು ಸುಧಾರಿಸುವ ದಿಶೆಯಲ್ಲಿ ಯತ್ನಿಸಬೇಕಾದ ಅಗತ್ಯವಿದೆ’ ಎಂದು ಹೇಳಿದರು. 

ಜೈಶಂಕರ್‌ ಅವರು ವಿದೇಶ ವ್ಯವಹಾರಗಳ ಸಚಿವಾಲಯದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಗೇಟ್‌ ವೇ ಡಯಲಾಗ್‌ ಈವೆಂಟ್‌ನಲ್ಲಿ “ರಾಜಕೀಯ ಬದಲಾವಣೆ ಮತ್ತು ಆರ್ಥಿಕ ಅಸ್ಥಿರತೆ’ ಕುರಿತ ಚರ್ಚೆಯಲ್ಲಿ ಮಾತನಾಡುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next