Advertisement
ಕಳೆದ ನವೆಂಬರ್‌ನಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೂರನೇ ಟ್ವೆಂಟಿ20 ಪಂದ್ಯಕ್ಕೆ 26ರ ಹರೆಯದ ಶೆಹಜಾದ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ ಇತ್ತೀಚೆಗೆ ಅವರ ಉತ್ತಮ ಫಾರ್ಮ್ನ ಆಧಾರದಲ್ಲಿ ತಂಡಕ್ಕೆ ಮತ್ತೆ ಮರಳಲು ಯಶಸ್ವಿಯಾದರು. ಆದರೆ 35ರ ಹರೆಯದ ಅಕ್ಮಲ್‌ಗೆ ಅದೃಷ್ಟ ಒಲಿಯಲಿಲ್ಲ. ದೇಶೀಯ ಕ್ರಿಕೆಟ್ ಕೂಟಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾಷ್ಟ್ರೀಯ ಟ್ವೆಂಟಿ20 ಕೂಟದಲ್ಲಿ 432 ರನ್ ಗಳಿಸುವ ಮೂಲಕ ಅಕ್ಮಲ್ ಗರಿಷ್ಠ ರನ್ ಗಳಿಸಿದ ಆಟಗಾರ ಎಂದೆನಿಸಿಕೊಂಡಿದ್ದರು. ಕಳೆದ ವಾರ ನಡೆದ ದೇಶೀಯ ವನ್‌ಡೇ ಕಪ್‌ನಲ್ಲಿ ದ್ವಿಶತಕ ಕೂಡ ಬಾರಿಸಿದ್ದರು.
ಸರ್ಪರಾಜ್ ಅಹ್ಮದ್ (ನಾಯಕ), ಫಖಾರ್ ಜಮಾನ್, ಅಹ್ಮದ್ ಶೆಹಜಾದ್, ಬಾಬರ್ ಅಜಂ, ಶೋಯಿಬ್ ಮಲಿಕ್, ಹ್ಯಾರಿಸ್ ಸೊಹೈಲ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಆಮಿರ್ ಯಾಮಿನ್, ಮೊಹಮ್ಮದ್ ಆಮಿರ್, ಹಸನ್ ಅಲಿ, ರುಮ್ಮಾನ್ ರಯೀಸ್, ಉಮರ್ ಅಮಿನ್.