ಇಸ್ಲಾಮಾಬಾದ್: ಬೆಳ್ಳುಳ್ಳಿ ಮತ್ತು ಶುಂಠಿಯ ಜೋಡಿ ಅಡುಗೆಯಲ್ಲಿ ರುಚಿ ಹೆಚ್ಚಿಸುತ್ತದೆ. ಹಾಗೆಂದ ಮಾತ್ರಕ್ಕೆ ಅವೆರೆಡು ಒಂದೇ ಅಲ್ಲ. ಅದನ್ನರಿಯದ ಪಾಕಿಸ್ತಾನ ಸಚಿವರೊಬ್ಬರು ಬೆಳ್ಳುಳ್ಳಿಯನ್ನೇ ಶುಂಠಿ ಎಂದು ಕರೆದಿದ್ದಾರೆ.
ಕೆಲ ದಿನಗಳ ಹಿಂದೆ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಬೆಲೆ ಏರಿಕೆ ಕುರಿತಾಗಿ ಪಾಕ್ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ಸುದ್ದಿಗೋಷ್ಠಿ ನಡೆಸುತ್ತಿದ್ದರು.
ಆ ವೇಳೆ ಅವರು ಗಾರ್ಲಿಕ್(ಬೆಳ್ಳುಳ್ಳಿ) ಎಂದರೆ ಅದ್ರಕ್(ಶುಂಠಿ) ಎಂದಿದ್ದಾರೆ. ಆ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ.
ಗಾರ್ಲಿಕ್ ಮತ್ತು ಜಿಂಜರ್ ಹೆಸರು ಗೊಂದಲವಾಗುವುದು ಸತ್ಯ. ಆದರೆ ಸಚಿವರಾಗಿ, ಸುದ್ದಿಗೋಷ್ಠಿಯಲ್ಲಿ ಗೊಂದಲ ಮಾಡಿಕೊಳ್ಳುವುದು ಎಷ್ಟು ಸರಿ ಎಂದು ಜನರು ಟೀಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳುವ ಅಗತ್ಯವಿದೆ : ರಾಜ್ಯಪಾಲ