Advertisement

ಪಾಕಿಸ್ತಾನದ ಮೇಲೆ ಭಾರತದ ಅಣು ಅಸ್ತ್ರ

08:12 AM Sep 20, 2017 | |

ನ್ಯೂಯಾರ್ಕ್‌: ಸತತವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ಇಡೀ ಜಗತ್ತಿಗೇ ಮಾರಕವಾಗಿರುವ “ಉತ್ತರ ಕೊರಿಯಾ’ವನ್ನು ಮುಂದಿಟ್ಟು ಕೊಂಡು, ಅಂತಾ ರಾಷ್ಟ್ರೀಯ ಮಟ್ಟದಲ್ಲಿ “ಪಾಕಿಸ್ತಾನ’ವನ್ನು ಹಣಿಯಲು ಭಾರತ ಮುಂದಾಗಿದೆ.

Advertisement

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುವ ಸಂಬಂಧ ಅಮೆರಿಕಕ್ಕೆ ತೆರಳಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು, ಅಮೆರಿಕ ವಿದೇಶಾಂಗ ಸಚಿವ ರೆಕ್ಸ್‌ ಟಿಲ್ಲರ್ಸನ್‌ ಮತ್ತು ಜಪಾನ್‌ ವಿದೇಶಾಂಗ ಸಚಿವ ಟಾರೋ ಕೋನೋ ಜತೆ ಇದೇ ವಿಷಯ ಪ್ರಸ್ತಾಪಿಸಿದ್ದಾರೆ. ಉತ್ತರ ಕೊರಿಯಾದ ಅಣ್ವಸ್ತ್ರ ನಿಗ್ರಹಕ್ಕೂ ಮುನ್ನ, ಆ ದೇಶಕ್ಕೆ ಅಣು ತಂತ್ರಜ್ಞಾನ ಕೊಟ್ಟವರ್ಯಾರು ಎಂಬ ಬಗ್ಗೆ ತನಿಖೆ ನಡೆಸಿ ಪತ್ತೆ ಹಚ್ಚಬೇಕು. ಇಂದಿನ ಆತಂಕದ ಪರಿಸ್ಥಿತಿಗೆ “ಅವರನ್ನೇ’ ಹೊಣೆ ಮಾಡಿ, ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ರಾಜತಾಂತ್ರಿಕ ಸೂಕ್ಷ್ಮತೆಯಲ್ಲಿ ಪಾಕಿಸ್ತಾನದ ಹೆಸರೆತ್ತದೇ ಅಣು ತಂತ್ರಜ್ಞಾನ ಸೋರಿಕೆಯ ವಿಚಾರ ಪ್ರಸ್ತಾಪಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಯವಂಚಕ ಪಾಕಿಸ್ತಾನಕ್ಕೆ ಮತ್ತೂಂದು ಆಘಾತ ನೀಡಿದ್ದಾರೆ. ಈ ಬಗ್ಗೆ ಸ್ವತಃ ವಿದೇಶಾಂಗ ವಕ್ತಾರ ರವೀಶ್‌ಕುಮಾರ್‌ ಅವರೇ ಸ್ಪಷ್ಟಪಡಿಸಿದ್ದಾರೆ.

ಸೆಪ್ಟೆಂಬರ್‌ 3 ರಂದು ಉತ್ತರ ಕೊರಿಯಾ ಪ್ರಬಲ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು, ಇದರಿಂದಾಗಿ ಕೃತಕವಾಗಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದು ಆ ದೇಶದ ಆರನೇ ಅಣ್ವಸ್ತ್ರ ಪರೀಕ್ಷೆಯಾಗಿದ್ದು, ಇದೇ ಅತ್ಯಂತ ಪ್ರಬಲ ಬಾಂಬ್‌ ಎಂದೇ ಹೇಳಲಾಗುತ್ತಿದೆ. ಈ ಬಾಂಬ್‌ನ ಪರೀಕ್ಷೆ ನಂತರ, ವಿಶ್ವಸಂಸ್ಥೆ ಕೂಡ ಉತ್ತರ ಕೊರಿಯಾ ಮೇಲೆ ದಿಗ್ಬಂಧನ ಹೇರಿದೆ. ವಿಚಿತ್ರವೆಂದರೆ, ಚೀನಾ ಮತ್ತು ರಷ್ಯಾದ ಅಭಯ ಇರಿಸಿಕೊಂಡಿರುವ ಉತ್ತರ ಕೊರಿಯಾ ಈ ದಿಗ್ಬಂಧನಕ್ಕೆ ಕ್ಯಾರೇ ಎಂದಿಲ್ಲ.

ಜಾಗತಿಕವಾಗಿ ಸದ್ಯ ಉತ್ತರ ಕೊರಿಯಾ ಎಲ್ಲರ ತಲೆನೋವಾಗಿ ಪರಿಣಮಿಸಿದೆ. ರಷ್ಯಾ ಮತ್ತು ಚೀನಾ ಉತ್ತರ ಕೊರಿಯಾಗೆ ಬೆಂಬಲ ನೀಡಿದರೂ, ಅಣ್ವಸ್ತ್ರದ ವಿಚಾರದಲ್ಲಿ ಏನೂ ಮಾಡುವಂತಿಲ್ಲ. ಹೀಗಾಗಿ ಇದೇ ಸರಿಯಾದ ವೇಳೆ ಎಂದು ಭಾವಿಸಿದ ಭಾರತ, ಪಾಕಿಸ್ತಾನದ ಬೆನ್ನುಮೂಳೆ ಮುರಿಯಲು ಹೊರಟಿದೆ. ಅಲ್ಲದೆ ಈ ಹಿಂದೆ ಪಾಕಿಸ್ತಾನ ಅಣು ಯೋಜನೆಯ ಮುಖ್ಯಸ್ಥ ಎ.ಕ್ಯೂ.ಖಾನ್‌, ಉತ್ತರ ಕೊರಿಯಾಗೆ ಅಣು ತಂತ್ರಜ್ಞಾನ ಮಾರಾಟ ಮಾಡಿದ್ದು, ಜಗಜ್ಜಾಹೀರಾಗಿದೆ. ಈಗ ಉತ್ತರ ಕೊರಿಯಾಗೆ ಅಣು ತಂತ್ರಜ್ಞಾನ ಸೋರಿಕೆ ಮಾಡಿದವರ ವಿರುದ್ಧ ತನಿಖೆ ನಡೆಸಿದರೆ, ಪಾಕಿಸ್ತಾನವೇ ಸಿಕ್ಕಿಬೀಳುವುದು ಗ್ಯಾರಂಟಿ. ಒಂದು ವೇಳೆ ತನಿಖೆ ನಡೆಸಿ, ಪಾಕ್‌ ತಪ್ಪಿತಸ್ಥನೆಂದು ಕಂಡು ಬಂದು ಶಿಕ್ಷೆಗೆ ಗುರಿಯಾದರೆ ಭಾರತಕ್ಕೆ ಅದು ಅಭೂತಪೂರ್ವ ಗೆಲುವಾಗುತ್ತದೆ. ಅಲ್ಲದೆ ಉತ್ತರ ಕೊರಿಯಾ ಮತ್ತು ಪಾಕಿಸ್ತಾನದಂಥ ದೇಶಗಳನ್ನು ರಾಜಾರೋಷವಾಗಿಯೇ
ಬೆಳೆಸುತ್ತಿರುವ ಚೀನಾಗೂ ತಕ್ಕ ಉತ್ತರ ನೀಡಿದಂತೆ ಆಗುತ್ತದೆ. 

ಅಮೆರಿಕದ ನಿಧಿಗೆ “ಟೆರರ್‌ ಲಿಂಕ್‌’: ಪಾಕಿಸ್ತಾನದ ಮೇಲೆ ಭಾರತದ ಅಣು ಅಸ್ತ್ರಉತ್ತರ ಕೊರಿಯಾ ತನ್ನ ಅಣು ಕಾರ್ಯಕ್ರಮಗಳ ಮೂಲಕ ಜಗತ್ತಿಗೆ ಮಾರಕವಾಗಿದ್ದರೆ, ಪಾಕಿಸ್ತಾನ ಉಗ್ರರಿಗೆ ನೆಲೆ ನೀಡುವ ಮೂಲಕ ಇನ್ನೊಂದು ರೀತಿಯಲ್ಲಿ ತಲೆನೋವಾಗಿದೆ. ಈ ಮಾತನ್ನು ಸ್ವತಃ ಅಮೆರಿಕವೇ ಹೇಳಿದೆ. ಆಘಾ^ನಿಸ್ತಾನದಲ್ಲಿನ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಸಾಥ್‌ ನೀಡಬೇಕು ಮತ್ತು ಉಗ್ರ ಸಂಘಟನೆ ಎಲ್‌ಇಟಿ ವಿರುದ್ಧ ಅತ್ಯುಗ್ರ ಕ್ರಮ ತೆಗೆದುಕೊಳ್ಳಬೇಕು ಎಂಬ ಷರತ್ತು ಹಾಕಿರುವ ಅಮೆರಿಕ, ಇವುಗಳನ್ನು ಪಾಲಿಸಿದರೆ ಮಾತ್ರ ಧನ ಸಹಾಯ ಎಂದು ಹೇಳಿದೆ. ಅಮೆರಿಕದ ಸೆನೆಟ್‌ ಈ ಬಗ್ಗೆ ಪ್ರಸ್ತಾಪ ಮುಂದಿಟ್ಟಿದ್ದು, ಅಲ್ಲಿ ಅಂಗೀಕಾರವಾದರೆ ಈ ನಿಯಮ ಕಾನೂನಾಗಿ ಜಾರಿಗೆ ಬರಲಿದೆ. ಆಗ ಪಾಕಿಸ್ತಾನ ಅನಿವಾರ್ಯವಾಗಿ ಉಗ್ರ
ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

Advertisement

ನಾವು ಉತ್ತರ ಕೊರಿಯಾದ ಅಣು ಪರೀಕ್ಷೆಗಳನ್ನು ಅತ್ಯುಗ್ರವಾಗಿ ಖಂಡಿಸಿದ್ದೇವೆ. ಇದರ ಜತೆಯಲ್ಲಿಯೇ ಆ ದೇಶಕ್ಕೆ ಅಣು ತಂತ್ರಜ್ಞಾನ ಸೋರಿಕೆ ಮಾಡಿದ ದೇಶದ ವಿರುದ್ಧವೂ ಕ್ರಮ ತೆಗೆ ದುಕೊಳ್ಳಲು ಜಾಗತಿಕ ಮಟ್ಟದಲ್ಲಿ ಒತ್ತಾಯಿಸಿದ್ದೇವೆ.
ರವೀಶ್‌ಕುಮಾರ್‌, ವಿದೇಶಾಂಗ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next