Advertisement

ಫೈನಲ್ ನಲ್ಲಿ ಭಾರತ ತಂಡವನ್ನು ಬಯಸುತ್ತೇನೆ : ಪಾಕ್ ತಂಡದ ಮೆಂಟರ್

11:08 PM Nov 09, 2022 | Team Udayavani |

ಸಿಡ್ನಿ :  ”ಟಿ20 ವಿಶ್ವಕಪ್‌ ನ  ಫೈನಲ್‌ನಲ್ಲಿ ನಾನು ಭಾರತ ತಂಡವನ್ನು ನೋಡಲು ಬಯಸುತ್ತೇನೆ” ಎಂದು ಪಾಕಿಸ್ಥಾನ ತಂಡದ ಮೆಂಟರ್ ಮ್ಯಾಥ್ಯೂ ಹೇಡನ್ ಹೇಳಿಕೆ ನೀಡಿದ್ದಾರೆ.

Advertisement

ಪಾಕ್ ತಂಡ ಫೈನಲ್  ಪ್ರವೇಶದ ಬಳಿಕ ಹೇಳಿಕೆ ನೀಡಿದ ಆಸೀಸ್ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ”ಇಂದು ರಾತ್ರಿ ತುಂಬಾ ವಿಶೇಷವಾಗಿತ್ತು. ನೀವು ನೋಡಿದ ಆ ವೇಗದ ಬೌಲಿಂಗ್ ದಾಳಿಯು ನಂಬಲಾಗದ ಕೆಲಸ ಮಾಡಿದೆ. ನಾವು ಇನ್ನೂ ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೋಡಿಲ್ಲ ಎಂದು ನಾನು ಭಾವಿಸುತ್ತೇನೆ, ಇದು ಬಹುಶಃ ನಮ್ಮನ್ನು ಫೈನಲ್‌ನಲ್ಲಿ ಎದುರಿಸುವವರಿಗೆ ಭಯಾನಕ ಭಾಗವಾಗಿದೆ” ಎಂದು ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಹೇಳಿದ್ದಾರೆ.

ಟಿ20 ವಿಶ್ವಕಪ್‌ ನ ಬುಧವಾರ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮೇಲುಗೈ ಸಾಧಿಸಿದ ಪಾಕಿಸ್ಥಾನ ತಂಡ ನ್ಯೂಜಿಲ್ಯಾಂಡ್ ಎದುರು 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲ್ಯಾಂಡ್‌ 4 ವಿಕೆಟ್ ನಷ್ಟಕ್ಕೆ 152 ರನ್ ಗಳನ್ನು ಮಾತ್ರ ಗಳಿಸಿತು.ಪಾಕ್ ಬೌಲರ್ ಗಳು ದೊಡ್ಡ ಮೊತ್ತದ ಸ್ಕೋರ್ ಮಾಡದಂತೆ ಕಡಿವಾಣ ಹಾಕಿದರು.

ನವೆಂಬರ್ 13 ರಂದು ಮೆಲ್ಬೋರ್ನ್‌ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಂತಹ ಐಕಾನಿಕ್ ಸ್ಥಳದಲ್ಲಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕ್, ಭಾರತ ಅಥವಾ ಇಂಗ್ಲೆಂಡ್ ಅನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next