ಇಸ್ಲಾಮಾಬಾದ್: ಆರ್ಥಿಕ ದಿವಾಳಿತನ ಎದುರಿಸುತ್ತಿರುವ ಪಾಕಿಸ್ಥಾನದ ಪರಿಸ್ಥಿತಿ ವಿಶ್ಲೇಷಿಸಿರುವ ಪಾಕ್ ಮಾಧ್ಯಮಗಳು ಆರ್ಥಿ ಕತೆಯಲ್ಲಿ ಸ್ಪಷ್ಟ ನಿಲುವು ಹೊಂದಿರುವ ಭಾರತದ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಜಿಡಿಪಿ 3 ಲಕ್ಷಕೋಟಿ ಡಾಲರ್‌ಗಿಂತಲೂ ಹೆಚ್ಚಾಗಿದೆ. ವಿದೇಶಗಳ ಜತೆಗಿನ ಭಾರತದ ನೀತಿ ವಿದೇಶಿ ಹೂಡಿಕೆ ಯನ್ನ ಹೆಚ್ಚಿಸುತ್ತಿದೆ ಎಂದು ಬಣ್ಣಿಸಿವೆ.
ಪಾಕಿಸ್ಥಾನದ ಖ್ಯಾತ ವಿಮರ್ಶಕರಾದ ಶಹಜಾದ್ ಚೌಧರಿ, ದಿ ಎಕ್ಸ್‌ಪ್ರೆಸ್ ಟ್ರಿ ಬ್ಯೂನ್ ಪತ್ರಿಕೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ವಿಶ್ವರಾಷ್ಟ್ರಗಳ ಪೈಕಿ ಕೃಷಿ, ಐಟಿ ಸಹಿತ ವಿವಿಧ ಕ್ಷೇತ್ರಗಳಲ್ಲಿ ಭಾರತ ಅಗ್ರಗಣ್ಯ ಕೊಡುಗೆಯನ್ನು ನೀಡುತ್ತಿದೆ. ವಿದೇಶಿ ನೀತಿಗಳ ಸಹಿತ ಪ್ರತೀ ವಿಚಾರ ದಲ್ಲಿಯೂ ಭಾರತಕ್ಕಿರುವ ಸ್ಪಷ್ಟ ನಿಲುವು, ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದಿದ್ದಾರೆ. ಜತೆಗೆ ಭಾರತವನ್ನು ಬ್ರ್ಯಾಂಡ್ ಆಗಿ ರೂಪಿಸಲು ಪ್ರಧಾನಿ ಮೋದಿ ಈ ಹಿಂದೆ ಯಾವ ನಾಯಕರೂ ಮಾಡಿರದ ಕೆಲವು ಕಾರ್ಯಗಳನ್ನು ಮಾಡಿದ್ದು, ಆ ಮೂಲಕ ವಿದೇಶಿ ಹೂಡಿಕೆಗಳನ್ನು ಹೆಚ್ಚಿಸಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
ಆಹಾರಕ್ಕೂ ಜನರ ಪರದಾಟ: ಆರ್ಥಿಕ ಬಿಕ್ಕಟ್ಟಿನಿಂದಾಗಿ ಆಹಾರ ಪೂರೈಕೆಗೂ ಪಾಕ್ ಪರದಾಡುತ್ತಿದ್ದು, ಗೋಧಿ ಹಿಟ್ಟನ್ನು ಹೊತ್ತೂ ಯ್ಯುತ್ತಿದ್ದ ಟ್ರಕ್‌ನ ಹಿಂದೆ ಸಾಲು, ಸಾಲು ಬೈಕ್ ಸವಾರರು ರೇಸ್‌ನಂತೆ ಮುಗಿಬಿದ್ದು, ಹಿಟ್ಟಿನ ಖರೀದಿಗೆ ಮುಂದಾಗಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಪಾಕ್‌ನ ಈ ಪರಿಸ್ಥಿತಿಗೆ ನಾಯ ಕತ್ವವೇ ಕಾರಣ ಎಂದು ಟೀಕಿಸಿದ್ದಾರೆ.