Advertisement

48 ಗಂಟೆಗಳಲ್ಲಿ ಏಕದಿನ ನಂ.1 ಸ್ಥಾನವನ್ನು ಕಳೆದುಕೊಂಡ ಪಾಕ್

08:50 AM May 08, 2023 | Team Udayavani |

ಕರಾಚಿ: ಏಕದಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ನಂ.1 ತಂಡವಾಗಿ ಆಗಿ ಕಾಣಿಸಿಕೊಂಡಿದ್ದ ಪಾಕಿಸ್ತಾನ 48 ಗಂಟೆಗಳಲ್ಲಿ ತನ್ನ ಮೊದಲ ಸ್ಥಾನವನ್ನು ಕಳೆದುಕೊಂಡಿದೆ.

Advertisement

ರವಿವಾರ ಕರಾಚಿಯಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ದದ 5ನೇ ಏಕದಿನ ಪಂದ್ಯದಲ್ಲಿ ಪಾಕ್‌ 47 ರನ್‌ ಗಳಿಗೆ ಸೋಲಿಗೆ ಶರಣಾಗಿರುವುದು ಇದಕ್ಕೆ ಕಾರಣವಾಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ ಆಟಗಾರರು 49.3 ಓವರ್‌ ನಲ್ಲಿ 299 ರನ್‌ ಪೇರಿಸಿತ್ತು. ಗುರಿ ಬೆನ್ನಟ್ಟಲು ಬಂದ ಪಾಕ್‌ ಆಟಗಾರರು ಇಫ್ತಿಕರ್ ಅಹಮದ್ 94 ರನ್‌, ಆಘಾ ಸಲ್ಮಾನ್ ಅವರ 57 ರನ್‌ ಹೊರತಾಗಿಯೂ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಅಂತಿಮವಾಗಿ ಪಾಕ್‌ 46.1 ಓವರ್‌ ನಲ್ಲಿ 252 ರನ್‌ ಗಳಿಸಿ ಸೋಲಿಗೆ ಶರಣಾಯಿತು.

ಅಂತಿಮ ಏಕದಿನದಲ್ಲಿ ಸೋತ ಬಳಿಕ ಐಸಿಸಿ ಏಕದಿನ ರ‍್ಯಾಂಕಿಂಗ್‌ ನಲ್ಲಿ ಬದಲಾವಣೆ ಆಗಿದೆ. 113 ಅಂಕಗಳಿಸಿ ಮೊದಲ ಸ್ಥಾನದಲ್ಲಿದ್ದ ಪಾಕ್‌ 112 ಅಂಕದೊಂದಿಗೆ 3ನೇ ರ‍್ಯಾಂಕ್‌ ಗೆ ಕುಸಿದಿದೆ. ಏಕದಿನದಲ್ಲಿ ಪ್ರಾಬಲ್ಯ ಮೆರೆದಿರುವ ಆಸ್ಟ್ರೇಲಿಯ ತಂಡ 113 ಅಂಕದೊಂದಿಗೆ ಮತ್ತೆ ಮೊದಲ ಸ್ಥಾನಕ್ಕೀರಿದೆ. ಇನ್ನು ಟೀಮ್‌ ಇಂಡಿಯಾ 113 ಅಂಕದೊಂದಿಗೆ 2ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಅಂತಿಮ ಏಕದಿನದಲ್ಲಿ ಸೋತಿರುವ ಪಾಕ್‌ 4-1 ರೊಂದಿಗೆ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next