ನಾಗ್ಪುರ: ಮೊದಲೇ ಕೋವಿಡ್ ಆತಂಕ ಕಾಡುತ್ತಿದೆ. ಬೆಳೆದ ಫಸಲನ್ನು ಮಾರುಕಟ್ಟೆಗೆ ಕೊಂಡೊಯ್ದರೆ ಕೊಳ್ಳುವವರಿಲ್ಲ.
ಹೀಗಿರುವಾಗ ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳ ರೈತರಿಗೆ ಮತ್ತೂಂದು ಆಘಾತ ಎದುರಾಗಿದೆ.
ಪಾಕ್‌ನಿಂದ ಮಿಡತೆಗಳು ಹಾರಿ ಬಂದಿದ್ದು, ಈಗಾಗಲೇ ಬೆಳೆದು ನಿಂತಿರುವ ಬೆಳೆಯನ್ನು ಹಾನಿಗೊಳಿಸುವ ಆತಂಕ ಎದುರಾಗಿದೆ. ಇದು ರೈತರಿಗಷ್ಟೇ ಎದುರಾಗಿರುವ ಸಂಕಷ್ಟವಲ್ಲ, ಬದಲಿಗೆ ದೇಶದ ಆಹಾರ ಭದ್ರತೆಗೂ ಇದರಿಂದ ಅಪಾಯವಿದೆ.
ಈಗ ಕರ್ನಾಟಕದ ನೆರೆಯ ಮಹಾರಾಷ್ಟ್ರದ ನಾಗ್ಪುರಕ್ಕೂ ಹಾನಿ ಮಾಡಲಾರಂಭಿಸಿವೆ. ಮೋರ್ಶಿ, ಅಸ್ತಿ, ವಡಾಲ ಮೂಲಕ ಅವು ಮಹಾರಾಷ್ಟ್ರ ಪ್ರವೇಶ ಮಾಡಿವೆ. ಒಂದು ವೇಳೆ ರಭಸವಾದ ಗಾಳಿ ಬೀಸಿದಲ್ಲಿ ರಾಜ್ಯದತ್ತಲೂ ದಾಳಿ ನಡೆಸಬಹುದಾಗಿದೆ.
ಆತಂಕ ಏಕೆ?
ಸಾಮಾನ್ಯವಾಗಿ ಭಾರತದಲ್ಲಿ ಮಿಡತೆಗಳು ಕಾಣಿಸಿಕೊಳ್ಳುವುದು ಜುಲೈ, ಆಗಸ್ಟ್‌ನಲ್ಲಿ. ಈ ಬಾರಿ ತಿಂಗಳು ಮೊದಲೇ ಬಂದಿರುವುದರಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆ ನಾಶವಾಗುವ ಅಪಾಯವಿದೆ.