Advertisement

ಇಲ್ಲಿನ ಮುಸ್ಲಿಮರು ದೇಶ ವಿರೋಧಿಗಳು ಎಂದು ವಿಶ್ವ ಮಟ್ಟದಲ್ಲಿ ಬಿಂಬಿಸಲು ಪಾಕ್ ಯತ್ನ

10:12 AM Sep 13, 2019 | Hari Prasad |

ನವದೆಹಲಿ: ಜಮೈತ್-ಉಲೇಮಾ-ಇ-ಹಿಂದ್ ನ ಸಾಮಾನ್ಯ ಸಮಿತಿ ಸಭೆಯು ಇಂದು ನಿರ್ಣಯ ಒಂದನ್ನು ಕೈಗೊಂಡಿದೆ ಮತ್ತು ಅದರ ಪ್ರಕಾರ, ‘ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ’ ಎಂಬ ಅಂಶವನ್ನು ಸಂಘಟನೆಯು ಪುನರುಚ್ಛರಿಸಿದೆ. ಇಷ್ಟು ಮಾತ್ರವಲ್ಲದೇ ರಾಷ್ಟ್ರೀಯ ನಾಗರಿಕ ನೋಂದಣಿ ಹಾಗೂ ದೇಶದಲ್ಲಿರುವ ವಿದೇಶಿಯರನ್ನು ಗುರುತಿಸುವ ಸರಕಾರದ ನಿಲುವುಗಳನ್ನು ಈ ಸಮಿತಿಯು ಬೆಂಬಲಿಸಿದೆ.

Advertisement

ದೇಶದ ಭದ್ರತೆಯ ದೃಷ್ಟಿಯಿಂದ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ಕ್ರಮವನ್ನು ನಿಶ್ಯರ್ಥವಾಗಿ ಬೆಂಬಲಿಸಲು ಈ ಸಮಿತಿಯ ಉನ್ನತ ಮಂಡಳಿ ಸದಸ್ಯರು ನಿರ್ಧರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜಮೈತ್-ಉಲೇಮಾ-ಇ-ಹಿಂದ್ ನ ಸಾಮಾನ್ಯ ಕಾರ್ಯದರ್ಶಿ ಮೌಲಾನ ಮಹಮ್ಮದ್ ಮದನಿ ಅವರು, ‘ಭಾರತದಲ್ಲಿರುವ ಮುಸ್ಲಿಂ ಸಮುದಾಯ ದೇಶ ವಿರೋಧಿಗಳು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ವ್ಯವಸ್ಥಿತ ಸಂಚನ್ನು ಪಾಕಿಸ್ಥಾನ ಮಾಡುತ್ತಿದೆ. ಪಾಕಿಸ್ಥಾನದ ಈ ಸಂಚನ್ನು ನಾವು ಖಂಡಿಸುತ್ತೇವೆ ಮತ್ತು ನಮ್ಮ ಅಸ್ತಿತ್ವವನ್ನು ಭಾರತೀಯತೆಯಿಂದ ಬೇರ್ಪಡಿಸುವ ನೆರೆ ರಾಷ್ಟ್ರದ ಸಂಚಿಗೆ ಈ ನೆಲದ ಯಾವ ಮುಸ್ಲಿಂರೂ ಬಲಿಯಾಗುವುದಿಲ್ಲ’ ಎಂದು ಅವರು ದೃಢ ಧ್ವನಿಯಲ್ಲಿ ಹೆಳಿದ್ದಾರೆ.


ಜಮೈತ್-ಉಲೇಮಾ-ಇ-ಹಿಂದ್ ಸಂಘಟನೆಯೂ ಈ ಹಿಂದೆಯೂ ಸಹ 1951 ಮತ್ತು 1963ರಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಹೊರಡಿಸಿತ್ತು ಮತ್ತು ನಾವು ಯಾವಾಗಲೂ ಈ ವಿಚಾರದಲ್ಲಿ ಭಾರತ ಸರಕಾರದ ನಿರ್ಧಾರದ ಪರವಾಗಿಯೇ ಇದ್ದೆವು ಎಂಬುದಕ್ಕೆ ಇದು ಸಾಕ್ಷಿ ಎಂದು ಮಹಮ್ಮದ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಭಾರತದಲ್ಲಿರುವ ಮುಸ್ಲಿಂ ಪಂಡಿತರನ್ನು ಒಳಗೊಂಡಿರುವ ಪ್ರಮುಖ ಸಂಘಟನೆಗಳಲ್ಲಿ ಜಮೈತ್-ಉಲೇಮಾ-ಇ-ಹಿಂದ್ ಮುಂಚೂಣಿಯಲ್ಲಿರುವುದರಿಂದ ಸಂಘಟನೆ ಇಂದು ನೀಡಿರುವ ಈ ಹೇಳಿಕೆ ಭಾರತ ಮತ್ತು ಪಾಕಿಸ್ಥಾನದ ನಡುವೆ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳಿಗೆ ಪ್ರಮುಖವಾದುದಾಗಿದೆ.

Advertisement

ದ್ವಿ ರಾಷ್ಟ್ರ ವಿಚಾರಕ್ಕೂ ವಿರೋಧ
ನಾವು ದ್ವಿ ರಾಷ್ಟ್ರ ವಿಚಾರವನ್ನೂ ಸಹ ಬಹಳ ಹಿಂದೆಯೇ ವಿರೋಧಿಸಿದ್ದೇವೆ. ಇದು ನಮ್ಮ ದೇಶ ಮತ್ತು ಈ ದೇಶದ ಸೌರ್ವಭೌಮತೆಯ ಜೊತೆ ಆಟವಾಡಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ ಎಂಬ ಮಾತುಗಳನ್ನು ಮೌಲಾನ ಮಹಮ್ಮದ್ ಮದನಿ ಅವರು ಒತ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next