Advertisement

ಚುನಾವಣೆ ಬಳಿಕ ಭಾರತಕ್ಕೆ ಆಹ್ವಾನ: ಪಾಕ್‌ ಪಿಎಂ ಖಾನ್‌

03:57 PM Oct 24, 2018 | Team Udayavani |

ಇಸ್ಲಾಮಾಬಾದ್‌/ಹೊಸದಿಲ್ಲಿ: ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಬಳಿಕ ಮತ್ತೆ ಮಾತುಕತೆಗೆ ಪ್ರಯತ್ನ ಮಾಡುವುದಾಗಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ರಿಯಾದ್‌ನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ನೆರೆಯ ಎಲ್ಲ ದೇಶಗಳ ಜತೆಗೆ ವಿಶೇಷವಾಗಿ ಭಾರತದ ಜತೆ ಶಾಂತಿಯುತ ಬಾಂಧವ್ಯ ಹೊಂದಲು ಬಯಸುತ್ತೇವೆ ಎಂದಿದ್ದಾರೆ.

Advertisement

ಇದರಿಂದ ಎರಡು ದೇಶಗಳಿಗೂ ಅನುಕೂಲ. ಭಾರತದ ಜತೆಗೆ ಸ್ನೇಹ ಹಸ್ತ ಚಾಚಿದರೂ ಅದಕ್ಕೆ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ಥಾನ ವಿರೋಧಿ ಹೇಳಿಕೆ, ಬೆಳವಣಿಗೆಗಳಿಂದ ಭಾರತದಲ್ಲಿ ಮತಗಳನ್ನು ಪಡೆಯಲಾಗುತ್ತಿದೆ ಎಂದೂ ಖಾನ್‌ ಹೇಳಿರುವುದಾಗಿ “ದ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ. 

ಇನ್ನೊಂದೆಡೆ, ಶ್ರೀನಗರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, “ನಾವು ಪಾಕಿಸ್ಥಾನ ಸೇರಿದಂತೆ ಯಾರೊಂದಿಗೂ ಮಾತುಕತೆಗೆ ಸಿದ್ಧರಿದ್ದೇವೆ. ಆದರೆ, ಉಗ್ರವಾದ ಮತ್ತು ಮಾತುಕತೆ ಜತೆಯಾಗಿ ಸಾಗಲು ಸಾಧ್ಯವಿಲ್ಲ’ ಎಂದು ಪುನರುಚ್ಚರಿಸಿದ್ದಾರೆ. ಇದೇ ವೇಳೆ, ರವಿವಾರ ಎಲ್‌ಒಸಿಯಲ್ಲಿ ಪಾಕ್‌ ನುಸುಳುಕೋರರ ವಿರುದ್ಧದ ಕಾರ್ಯಾ ಚರಣೆಯಲ್ಲಿ ಮೂವರು ಯೋಧರು ಹುತಾತ್ಮರಾದ ಪ್ರಕರಣ ಸಂಬಂಧ ಭಾರತವು ಪಾಕಿಸ್ಥಾನಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next