Advertisement

ಸಾಲಕ್ಕೆ ಮೊರೆಯಿಟ್ಟ ಪಾಕ್‌ ಹಾಕಿ ಫೆಡರೇಶನ್‌!

01:33 PM Nov 09, 2018 | Team Udayavani |

ಕರಾಚಿ: ಭುವನೇಶ್ವರದಲ್ಲಿ ಆರಂಭವಾಗಲಿರುವ ಹಾಕಿ ವಿಶ್ವಕಪ್‌ನಲ್ಲಿ ಭಾರತದ ಸಂಪ್ರದಾಯಕ ಎದುರಾಳಿ ಪಾಕಿಸ್ಥಾನ ಆಡುವುದು ಅನುಮಾನವಾಗಿದೆ. 

Advertisement

ಪಾಕಿಸ್ಥಾನ ಹಾಕಿ ಫೆಡರೇಶನ್‌ ತನ್ನದೇ ದೇಶದ ಕ್ರಿಕೆಟ್‌ ಮಂಡಳಿ (ಪಿಸಿಬಿ) ಬಳಿ ಸಾಲ ನೀಡುವಂತೆ ಮನವಿ ಸಲ್ಲಿಸಿದ್ದು, ಪಿಸಿಬಿ ಇದಕ್ಕೆ ಧನತ್ಮಾಕ ಉತ್ತರ ನೀಡಿಲ್ಲ. ಹೀಗಾಗಿ ಪಾಕಿಸ್ಥಾನ ಹಾಕಿ ತಂಡಕ್ಕೆ ಭಾರೀ ಹಿನ್ನಡೆಯಾಗುವ ಸಾಧ್ಯತೆವ ಇದೆ.

ಪಾಕಿಸ್ಥಾನ ಹಾಕಿ ತಂಡ ಮುಖ್ಯ ಕೋಚ್‌ ತಾಖೀರ್‌ ದಾರ್‌ ಹಾಗೂ ವ್ಯವಸ್ಥಾಪಕ ಹಸನ್‌ ಸರ್ದಾರ್‌ ಪಿಸಿಬಿ ಅಧ್ಯಕ್ಷ ಎಹಸಾನ್‌ ಮಣಿ ಅವರ ಬಳಿ ಪಾಕಿಸ್ಥಾನ ಹಾಕಿ ತಂಡದ ವಿಶ್ವಕಪ್‌ ವೆಚ್ಚಗಳನ್ನು ಭರಿಸಲು ಸಾಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. 

“ಗುರುವಾರ ಪಿಸಿಬಿ ಅಧ್ಯಕ್ಷರು ಭೇಟಿಗೆ ಅನುಮತಿ ನೀಡಿದ್ದರು. ಆದರೆ ತುರ್ತು ಕೆಲಸ ಕಾರಣ ಫೋನಿಗೆ ಸಿಕ್ಕಿದ ಅವರು, ಪಿಸಿಬಿ ಹಾಕಿ ಫೆಡರೇಶನ್‌ಗೆ ಯಾವುದೇ ಸಾಲ ನೀಡುವುದಿಲ್ಲ. ಫೆಡರೇಶನ್‌ ಹಿಂದೆ ನೀಡಿದ ಸಾಲವನ್ನೇ ಮರುಪಾವತಿಸಿಲ್ಲ.  ಸರ ಕಾರದಿಂದ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಲು ಏನಾದರೂ ಸಹಾಯ ದೊರೆಯಬಹುದೇ ಎಂಬ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ’ ಎಂಬುದಾಗಿ ತಾಖೀರ್‌ ತಿಳಿಸಿದ್ದಾರೆ. 

ಸ್ಪಂದಿಸದ ಸರಕಾರ
ವಿಶ್ವಕಪ್‌ನಲ್ಲಿ ಪಾಕಿಸ್ಥಾನ ಭಾಗವಹಿಸಲು ಆರ್ಥಿಕ ನೆರವು ನೀಡುವಂತೆ ಸರಕಾರಕ್ಕೆ ಸಾಕಷ್ಟು ಮನವಿ ಮಾಡಿಕೊಂಡಿದ್ದು, ಇಲ್ಲಿಯವರೆಗೆ ಒಮ್ಮೆ ಕೂಡ ಸರಕಾರ ಸ್ಪಂದಿಸಿಲ್ಲ ಎಂದು ಪಾಕಿಸ್ಥಾನ ಹಾಕಿ ಫೆಡರೇಶನ್‌ ಕಾರ್ಯದರ್ಶಿ ಶಹಬಾಜ್‌ ಅಹ್ಮದ್‌ ಬೇಸರ ವ್ಯಕ್ತಪಡಿಸಿದ್ದಾರೆ. 

Advertisement

“ಪ್ರಧಾನಿಗೆ ಮನವಿ ಸಲ್ಲಿಸಿದ್ದು, ಒಂದು ವಾರದೊಳಗಾಗಿ ಹಣಕಾಸಿ ವ್ಯವಸ್ಥೆ ಮಾಡುವಂತೆ ತಿಳಿಸಿ ದ್ದೇವೆ. ಇಲ್ಲದಿದ್ದರೆ ಭಾರತಕ್ಕೆ ಹೋಗು ವುದು ಕಷ್ಟ. ಆರ್ಥಿಕ ನೆರವು ದೊರಕದಿದ್ದರೆ  ಜಗತ್ತಿನ ಮುಂದೆ ತಲೆ ತಗ್ಗಿಸಬೇಕಾಗುತ್ತದೆ ಹಾಗೂ ಅಂತಾ ರಾಷ್ಟ್ರೀಯ ಹಾಕಿ ಫೆಡರೇಶನ್‌ನಿಂದ ಭಾರೀ ದಂಡ ಬೀಳಲಿದೆ’ ಎಂದು ಶಹಬಾಜ್‌ ಅಹ್ಮದ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next