Advertisement

ಶಿಕ್ಷೆಯ ಅವಧಿ ಮುಗಿದರೂ ಭಾರತೀಯ ನಾಗರಿಕರನ್ನು ಬಿಡುಗಡೆ ಮಾಡದೆ ಉದ್ಧಟತನ ಮೆರೆದ ಪಾಕ್

09:50 AM Nov 20, 2019 | Team Udayavani |

ನವದೆಹಲಿ: ಶಿಕ್ಷೆ ಅವಧಿಯನ್ನು ಪೂರ್ಣಗೊಳಿಸಿದ್ದರೂ ಭಾರತೀಯ ಮೀನುಗಾರರು ಮತ್ತು ಕೈದಿಗಳ  ಬಿಡುಗಡೆಗೆ ಪಾಕ್ ನಿರಾಕರಿಸಿದೆ. ಆ ಮೂಲಕ 2008ರಲ್ಲಿ ನಡೆದ  ಕಾನ್ಲುಲರ್ ಒಪ್ಪಂದವನ್ನು ಉಲ್ಲಂಘಿಸಿದೆ.

Advertisement

ಸದ್ಯ ಪಾಕಿಸ್ತಾನವು 209 ಭಾರತೀಯ ಮೀನುಗಾರರನ್ನು ಮತ್ತು 52 ಭಾರತೀಯ ಕೈದಿಗಳನ್ನು ತನ್ನ ವಶದಲ್ಲಿಟ್ಟುಕೊಂಡಿದೆ. ಈಗಾಗಲೇ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರು ಭಾರತಕ್ಕೆ ವಾಪಾಸ್ ಕಳುಹಿಸಲು ಪಾಕ್ ಹಿಂದೇಟು ಹಾಕುತ್ತಿದ್ದು ಆ ಮೂಲಕ ಕುತಂತ್ರಿ ಬುದ್ದಿ ಮೆರೆದಿದೆ.

ಮೇ 21, 2008 ರಂದು ಭಾರತ-ಪಾಕಿಸ್ತಾನ ಸಹಿ ಹಾಕಿದ ಕಾನ್ಸುಲರ್ ಒಪ್ಪಂದದ ಪ್ರಕಾರ ಉಭಯ ರಾಷ್ಟ್ರಗಳು , ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಆಯಾ ದೇಶಗಳ ಜೈಲುಗಳಲ್ಲಿರುವ ಕೈದಿಗಳ ಮತ್ತು ಮೀನುಗಾರರ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳುತ್ತವೆ. ಇದರ ಪ್ರಕಾರ ಪಾಕಿಸ್ಥಾನದ ಜೈಲುಗಳಲ್ಲಿ 209 ಭಾರತೀಯ ಮೀನುಗಾರರು ಮತ್ತು 52 ಕೈದಿಗಳಿದ್ದರೆ, ಭಾರತೀಯ ಜೈಲುಗಳಲ್ಲಿ 256 ಪಾಕಿಸ್ತಾನಿ ಕೈದಿಗಳು ಮತ್ತು 99 ಮೀನುಗಾರರಿದ್ದಾರೆ.

ವಾಸ್ತವವಾಗಿ ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದಾಗ, ಪಾಕಿಸ್ತಾನವು ಭಾರತೀಯ ನಾಗರಿಕರನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next