ನವದೆಹಲಿ: ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯನ್ನು ಭಾರತದಲ್ಲಿ ಮತ್ತೆ ತಡೆ ಹಿಡಿಯಲಾಗಿದೆ. ಕಾನೂನು ಬೇಡಿಕೆಯಿಂದಾಗಿ ಟ್ವಟಿರ್ ಖಾತೆಯನ್ನು ಭಾರತದಲ್ಲಿ ತಡೆ ಹಿಡಿಯಲಾಗಿದೆ.
“@GovtofPakistan” ಖಾತೆಗೆ ಭೇಟಿ ನೀಡಿದರೆ ಕಾನೂನು ಬೇಡಿಕೆಗೆ ಅನುಗುಣವಾಗಿ ಭಾರತದಲ್ಲಿ ಪಾಕ್ ಟ್ವಿಟರ್ ಖಾತೆಯನ್ನು ತಡೆ ಹಿಡಿಯಲಾಗಿದೆ ಎಂದು ಬರೆದಿರುವುದು ಕಾಣುತ್ತದೆ. ಈ ಹಿಂದೆ 2022 ರ ಜುಲೈ ಹಾಗೂ ಅಕ್ಟೋಬರ್ ನಲ್ಲೂ ಪಾಕ್ ಟ್ಟಿಟರ್ ಖಾತೆಗೆ ತಡೆ ನೀಡಲಾಗಿತ್ತು.
ಕಳೆದ ವರ್ಷ ಭಾರತ ವಿಶ್ವಸಂಸ್ಥೆ, ಟರ್ಕಿ, ಇರಾನ್ ಮತ್ತು ಈಜಿಪ್ಟ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಗಳ ಅಧಿಕೃತ ಟ್ವಿಟರ್ ಖಾತೆಗಳನ್ನು ನಿಷೇಧಿಸಿತು. ಆಗಸ್ಟ್‌ನಲ್ಲಿ ಎಂಟು ಯೂಟ್ಯೂಬ್-ಆಧಾರಿತ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಿದೆ. ಇದರಲ್ಲಿ ಪಾಕಿಸ್ತಾನ ಮೂಲದ ಒಂದು, ಹಾಗೆಯೇ ಆನ್‌ಲೈನ್‌ನಲ್ಲಿ “ನಕಲಿ, ಭಾರತ ವಿರೋಧಿ ವಿಷಯವನ್ನು” ಪ್ರಸಾರ ಮಾಡಿದ ಫೇಸ್‌ಬುಕ್ ಖಾತೆಯೂ ಸೇರಿದೆ.
ಭಾರತ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಹ್ಯಾಂಡಲ್ ವಿರುದ್ಧ ಕ್ರಮಕ್ಕೆ ಕಾರಣವೇನು ಎಂಬುದು ಇನ್ನೂ ಖಚಿತವಾಗಿಲ್ಲ.