Advertisement

ನಾಗರಿಕರಿಂದ ಚಿನ್ನ ಸಂಗ್ರಹಿಸಲು ಮುಂದಾದ ಪಾಕ್‌

01:02 AM Feb 21, 2022 | Team Udayavani |

ಇಸ್ಲಾಮಾಬಾದ್‌: ದಿವಾಳಿಯ ಅಂಚನ್ನು ತಲು ಪಿರುವ ಪಾಕಿಸ್ಥಾನ, ಇದೀಗ ತನ್ನಲ್ಲಿನ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿನ (ಫಾರೆಕ್ಸ್‌ ನಿಧಿ) ಹಣವನ್ನು ಹೆಚ್ಚಿ ಸುವ ಸಲುವಾಗಿ ನಾಗ ರಿಕರಿಂದ ಚಿನ್ನವನ್ನು ಠೇವಣಿ ರೂಪದಲ್ಲಿ ಪಡೆ ಯುವ ಯೋಜನೆಯೊಂ ದನ್ನು ಸಿದ್ಧಪಡಿಸಿದೆ.

Advertisement

ಸ್ಟೇಟ್‌ ಬ್ಯಾಂಕ್‌ ಆಫ್ ಪಾಕಿಸ್ಥಾನ (ಎಸ್‌ಬಿಪಿ) ಫೆ. 11ರಂದು ಹೊರಡಿಸಿರುವ ಪ್ರಕಟಣೆಯಂತೆ, ಪಾಕಿಸ್ಥಾನದ ವಿದೇಶಿ ವಿನಿಮಯ ನಿಧಿ ಕ್ರಮೇಣ ಇಳಿಕೆಯಾಗಿ 126 ಕೋಟಿ ರೂ.ಗಳಿಗೆ ಮುಟ್ಟಿದೆ. ಈ ನಿಧಿಯನ್ನು ಹೆಚ್ಚಿಸಲು ಪಾಕಿಸ್ಥಾನ ಈ ಯೋಜನೆ ರೂಪಿಸಿದೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಹಿಂದೂ ಸಂಘಟನೆ ಯುವಕನ ಬರ್ಬರ ಹತ್ಯೆ

ಪ್ರಸ್ತಾವನೆಯಲ್ಲೇನಿದೆ?: ಯಾವುದೇ ವಾಣಿಜ್ಯ ಬ್ಯಾಂಕ್‌ಗಳಲ್ಲಿ ನಾಗರಿಕರಿಂದ ಬ್ಯಾಂಕ್‌ಗಳಲ್ಲಿ ಚಿನ್ನವನ್ನು ಠೇವಣಿಯಿಡಲು ಅವಕಾಶ ಕಲ್ಪಿಸ ಲಾಗುತ್ತದೆ. ಚಿನ್ನದ ಠೇವಣಿ ಪ್ರಮಾಣಕ್ಕೆ ಅನು ಗುಣವಾಗಿ ಬಡ್ಡಿಯನ್ನು ಮಾಸಿಕ ರೂಪದಲ್ಲಿ ಚಿನ್ನದ ಮಾಲಕರಿಗೆ ನೀಡಲಾಗುತ್ತದೆ. ಅಡವಿಟ್ಟ ಚಿನ್ನವನ್ನು ಎಸ್‌ಬಿಪಿ, ಬೇರೊಂದು ಕಡೆಗೆ ಅಡವಿಟ್ಟು ಹಣ ತರುತ್ತದೆ. ಆ ಹಣವನ್ನು ವಿದೇಶಿ ಮೀಸಲು ನಿಧಿಗೆ ಸೇರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next