Advertisement

ವಿಂಡೀಸ್ ಪೇಸ್ ಅಟ್ಯಾಕ್ ಗೆ ಪತರುಗುಟ್ಟಿದ ಪಾಕ್

04:57 PM Jun 01, 2019 | keerthan |

ನಾಟಿಂಗ್ ಹ್ಯಾಂ: ವಿಶ್ವಕಪ್ ಕೂಟದ ದ್ವಿತೀಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವೇಗದ ಬೌಲರ್ ಗಳು ಪಾಕಿಸ್ಥಾನ ತಂಡದ ಮೇಲೆ ಸವಾರಿ ಮಾಡಿದ್ದಾರೆ. ಪಾಕಿಸ್ಥಾನ ತಂಡ ಕೇವಲ 21.4 ಓವರ್ ಗಳಲ್ಲಿ  105 ರನ್ ಗೆ ಆಲ್ ಔಟ್ ಆಗಿದೆ.

Advertisement

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದ ವೆಸ್ಟ್ ಇಂಡೀಸ್ ಲೆಕ್ಕಾಚಾರ ಸಂಪೂರ್ಣ ಯಶಸ್ವಿಯಾಯಿತು. ವಿಂಡೀಸ್ ವೇಗದ ಬೌಲರ್ ಗಳ ಆರ್ಭಟದ ಎದುರು ಪಾಕ್ ನ ಯಾವ ಬ್ಯಾಟ್ಸಮನ್ ಗಳು ಕೂಡಾ ಪ್ರತಿರೊಧ ತೋರಲಿಲ್ಲ. ಆರಂಭಿಕ ಆಟಗಾರ ಫಕರ್ ಜಮಾನ್ ಮತ್ತು ಬಾಬರ್ ಅಜಮ್ 22 ರನ್ ಗಳಿಸಿದ್ದೇ ಅತಿ ಹೆಚ್ಚು ಗಳಿಕೆ.

ವಿಂಡೀಸ್ ಪರ ನಾಯಕ ಜೇಸನ್ ಹೋಲ್ಡರ್ ಮೂರು ವಿಕೆಟ್ ಪಡೆದರೆ, ಒಶಾನೆ ಥೋಮಸ್ ನಾಲ್ಕು ವಿಕೆಟ್ ಪಡೆದರು. ಆಲ್ ರೌಂಡರ್ ರಸ್ಸೆಲ್ ಕೇವಲ ನಾಲ್ಕು ರನ್ ನೀಡಿ ಎರಡು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next