Advertisement

ಭಾರತವನ್ನು ಬೆಂಬಲಿಸಿದ ಪಾಕ್‌ ಫ್ಯಾನ್‌ ಬಶೀರ್‌ ಚಾಚಾ!

06:45 AM Sep 30, 2018 | Team Udayavani |

ದುಬಾೖ: ಪಾಕಿಸ್ಥಾನ ಏಶ್ಯ ಕಪ್‌ ಫೈನಲ್‌ ಪ್ರವೇಶಿಸಲು ವಿಫ‌ಲವಾಗಿರಬಹುದು, ಆದರೆ ಆ ತಂಡದ “ಸೂಪರ್‌ ಫ್ಯಾನ್‌’ ಬಶೀರ್‌ ಚಾಚಾ ಯಾನೆ “ಚಾಚಾ ಚಿಕಾಗೊ’ ಶುಕ್ರವಾರದ ಫೈನಲ್‌ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡರು. ಆದರೆ ಸುದ್ದಿ ಇದಲ್ಲ…

Advertisement

ಈ ಸಂದರ್ಭದಲ್ಲಿ ಬಶೀರ್‌ ಚಾಚಾ ಟೀಮ್‌ ಇಂಡಿಯಾ ಜೆರ್ಸಿ ಧರಿಸಿ, ತ್ರಿವರ್ಣ ಧ್ವಜ ಹಾರಾಡಿಸುತ್ತ ಪಾಕಿಸ್ಥಾನದ ಬದ್ಧ ಎದುರಾಳಿಯಾಗಿರುವ ಭಾರತ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರ ವೀಡಿಯೋ ಈಗ ವೈರಲ್‌ ಆಗಿದೆ.
ದುಬಾೖಯಲ್ಲಿ ಟೀಮ್‌ ಇಂಡಿಯಾ ಆಟಗಾರರು ಉಳಿದುಕೊಂಡ ಹೊಟೇಲ್‌ನಲ್ಲೇ ಬಶೀರ್‌ ಚಾಚಾ ಕೂಡ ತಂಗಿದ್ದರು. ಈ ಸಂದರ್ಭದಲ್ಲಿ ರೋಹಿತ್‌ ಶರ್ಮ, ಧೋನಿ ಮೊದಲಾದವರ ಜತೆ ನಿಂತು ಫೋಟೋ ತೆಗೆಸಿಕೊಂಡಿದ್ದರು.

ಸುಧೀರ್‌ ಗೌತಮ್‌ಗೆ ಸ್ಪಾನ್ಸರ್‌!
ಬಶೀರ್‌ ಚಾಚಾಗೆ ಸಂಬಂಧಿಸಿಸಂತೆ ಇನ್ನೊಂದು ದೊಡ್ಡ ಸುದ್ದಿ ಇದೆ. ಏಶ್ಯ ಕಪ್‌ ಪಂದ್ಯಾವಳಿಗಾಗಿ ಭಾರತೀಯ ಕ್ರಿಕೆಟಿನ ಭಾರೀ ಅಭಿಮಾನಿಯಾಗಿರುವ ಸುಧೀರ್‌ ಗೌತಮ್‌ ಅವರ ದುಬಾೖ ಪ್ರಯಾಣಕ್ಕೆ ಈ ಚಾಚಾ ಅವರೇ ಸ್ಪಾನ್ಸರ್‌! ಯುಎಇಗೆ ಆಗಮಿಸಲು ಆರ್ಥಿಕ ಸಂಕಟ ಎದುರಿಸುತ್ತಿದ್ದ ಸುಧೀರ್‌ ನೆರವಿಗೆ ನಿಲ್ಲುವ ಮೂಲಕ ಬಶೀರ್‌ ಎಲ್ಲರ ಹೃದಯ ಗೆದ್ದಿದ್ದಾರೆ.

ಇದೇ ಕೂಟದ ಭಾರತ-ಪಾಕಿಸ್ಥಾನ ಪಂದ್ಯಗಳ ವೇಳೆ ಪಾಕಿಸ್ಥಾನದ ಮತ್ತೋರ್ವ ಅಭಿಮಾನಿ ಆದಿಲ್‌ ತೇಜ್‌ ಜನಗಣಮನ ಹಾಡುತ್ತ, ತ್ರಿವರ್ಣ ಧ್ವಜ ಹಾರಾಡಿಸಿದ್ದನ್ನು ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next