ಇಸ್ಲಾಮಾಬಾದ್ : 2018ರ ಪಾಕ್ ಮಹಾ ಚುನಾವಣೆಯ ಫಲಿತಾಂಶಗಳು ಇಂದು ಗುರುವಾರ ನಸುಕಿನ ವೇಳೆಯಿಂದ ಹೊರಬೀಳಲು ಆರಂಭವಾಗಿವೆ.
ಇಮ್ರಾನ್ ಖಾನ್ ಅವರ ಪಾಕಿಸ್ಥಾನ್ ತೆಹರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷ ಖಚಿತ ಬಹುಮತದತ್ತ ಸಾಗುತ್ತಿರುವ ಟ್ರೆಂಡ್ ಕಂಡುಬರುತ್ತಿದೆ.
ಇಮ್ರಾನ್ ಖಾನ್ ಅವರು ನಿರ್ಣಾಯಕ ಇಸ್ಲಾಮಾಬಾದ್ 2 ಸೀಟನ್ನು 92,891 ಮತಗಳ ಭಾರೀ ಅಂತರದಲ್ಲಿ ಜಯಿಸಿದ್ದಾರೆ. ಅಂತೆಯೇ ಇಮ್ರಾನ್ ಎದುರು ಮಾಜಿ ಪ್ರಧಾನಿ ಮತ್ತು ಪಿಎಂಎಲ್‌ಎನ್ ನಾಯಕ ಶಹೀದ್ ಖಕಾನ್ ಅಬ್ಟಾಸಿ ಪರಾಭವಗೊಂಡಿದ್ದಾರೆ.
ಭ್ರಷ್ಟಾಚಾರದ ಹಗರಣದಲ್ಲಿ ಜೈಲು ಪಾಲಾಗಿರುವ ನವಾಜ್ ಷರೀಫ್ ಅವರು “ಈ ಚುನಾವಣೆಗಳಲ್ಲಿ ಭಾರೀ ಪ್ರಮಾಣದ ಅಕ್ರಮಗಳು ನಡೆದಿದ್ದು ವ್ಯತಿರಿಕ್ತ ಫಲಿತಾಂಶಗಳು ಬರುತ್ತಿವೆ’ ಎಂದು ದೂರಿದ್ದಾರೆ.
Related Articles
ಈಗ ದೊರಕಿರುವ ತಾಜಾ ಫಲಿತಾಂಶಗಳ ಪ್ರಕಾರ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ 113 ಸ್ಥಾನಗಳಲ್ಲಿ ಮುಂದಿದೆ; ಅನಂತರದಲ್ಲಿ ಪಿಎಂಎಲ್‌ಎನ್ 64, ಪಿಪಿಪಿ 43, ಇತರರು 50 ಸ್ಥಾನಗಳಲ್ಲಿ ಮುಂದಿದ್ದಾರೆ.
ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುವಲ್ಲಿ ವಿಳಂಬವಾಗಿದ್ದು ಇದರಿಂದ ಕೆಲವರಿಗೆ ಕಿರಿಕಿರಿಯಾಗಿದೆ ಎಂಬುದನ್ನು ಪಾಕ್ ಮುಖ್ಯ ಚುನಾವಣಾ ಆಯುಕ್ತ ಮುಹಮ್ಮದ್ ರಝಾ ಖಾನ್ ಒಪ್ಪಿಕೊಂಡಿದ್ದಾರೆ.