Advertisement

Pakistan ಮಾಜಿ ಪ್ರಧಾನಿ ಇಮ್ರಾನ್‌ಗೆ ಜಾಮೀನು ರಹಿತ ವಾರೆಂಟ್‌

11:48 PM Jul 11, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ ಮಾಜಿ ಪ್ರಧಾನಿ, ತೆಹ್ರೀಕ್‌ -ಇ -ಇನ್ಸಾಫ್ ಅಧ್ಯಕ್ಷ ಇಮ್ರಾನ್‌ ಖಾನ್‌ ವಿರುದ್ದ ಜಾಮೀನುರಹಿತ ಬಂಧನ ವಾರೆಂಟನ್ನು ಅಲ್ಲಿನ ಚುನಾ­ವಣ ಆಯೋಗ ಹೊರಡಿ­ಸಿದೆ.

Advertisement

ಹಾಗೆಯೇ ಮಾಜಿ ವಾರ್ತಾ ಸಚಿವ ಫ‌ವಾದ್‌ ಚೌಧರಿಗೂ ವಾರೆಂಟ್‌ ನೀಡಲಾಗಿದೆ. ಕಳೆದ ವರ್ಷ ಇಮ್ರಾನ್‌ ವಿರುದ್ಧ ಚುನಾವಣ ಆಯೋಗ ನಿಂದನೆ ಪ್ರಕರಣದ ವಿಚಾರಣೆ ಆರಂಭಿಸಿತ್ತು. ಇದೀಗ ಲಂಗುಲಗಾಮಿ­ಲ್ಲದೇ ಹಗುರವಾಗಿ ಮಾತನಾಡಿದ್ದನ್ನು ಕಾರಣವಾಗಿ ನೀಡಿ, ಬಂಧನ ಆದೇಶ ಹೊರಡಿಸಿದೆ.

ಮಂಗಳವಾರದೊಳಗೆ ಇಮ್ರಾನ್‌ ಮತ್ತು ಫ‌ವಾದ್‌ ವಿಚಾರಣೆಗೆ ಖು ದ್ದು ಹಾಜರಾಗಬೇಕಿತ್ತು. ಅದರಲ್ಲಿ ವಿಫ‌ಲವಾದ ಕಾರಣ ಈ ಆದೇಶ ಹೊರಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next