Advertisement

ಖಲಿಸ್ಥಾನಕ್ಕೆ ನಿಲ್ಲದ ಪಾಕ್‌ ನೆರವು

10:40 AM Apr 18, 2018 | Team Udayavani |

ಇಸ್ಲಾಮಾಬಾದ್‌: ಖಲಿಸ್ಥಾನ್‌ ಬಂಡುಕೋರರಿಗೆ ಪಾಕಿಸ್ಥಾನ ಬೆಂಬಲ ನೀಡುತ್ತಿದೆ ಎಂಬುದು ಹಿಂದಿನಿಂದಲೂ ಕೇಳಿಬರುತ್ತಿರುವ ಆರೋಪವಾದರೂ, ಇದೀಗ ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆಯ ಮುಖಂಡ ಹಫೀಜ್‌ ಸಯೀದ್‌ ಹಾಗೂ ಸಿಕ್ಖ್ ಬಂಡುಕೋರರ ಮುಖಂಡ ಗೋಪಾಲ್‌ ಸಿಂಗ್‌ ಚಾವ್ಲಾ ಇತ್ತೀಚೆಗೆ ಪಾಕಿಸ್ಥಾನದಲ್ಲಿ ಭೇಟಿ ಮಾಡಿರುವ ಫೋಟೋಗಳು ಬಹಿರಂಗಗೊಂಡಿವೆ. ಇದಕ್ಕೆ ಪಾಕ್‌ ಗುಪ್ತಚರ ಸಂಸ್ಥೆ ISI ನೆರವು ಇದೆ. ಈ ಆರೋಪವನ್ನು ಪಾಕ್‌ ನಿರಾಕರಿಸಿದೆ.

Advertisement

ಮೋದಿ ವಿರೋಧಿ ಭಾಷಣ: ಇಂಗ್ಲೆಂಡ್‌ಗೆ ಪ್ರಧಾನಿ ಮೋದಿ ಭೇಟಿಗೂ ಮುನ್ನ ಖಲಿಸ್ತಾನಿ ಉಗ್ರ ಸಂಘಟನೆ ಮುಖಂಡ ಪರಮ್‌ ಜಿತ್‌ ಸಿಂಗ್‌ ಪಮ್ಮಾ ಬಹಿರಂಗವಾಗಿ ಮೋದಿ,  ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾನೆ. ಈ ಸಂಬಂಧದ ವೀಡಿಯೋ ಹರಿದಾಡುತ್ತಿದ್ದು, ಇಂಗ್ಲೆಂಡ್‌ ಪೊಲೀಸ್‌ ಅಧಿಕಾರಿಗಳು ಇವರ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next